ಸೈಕ್ಲಿಂಗ್‌: ಕರ್ನಾಟಕ ಚಾಂಪಿಯನ್‌

7

ಸೈಕ್ಲಿಂಗ್‌: ಕರ್ನಾಟಕ ಚಾಂಪಿಯನ್‌

Published:
Updated:
ಸೈಕ್ಲಿಂಗ್‌: ಕರ್ನಾಟಕ ಚಾಂಪಿಯನ್‌

ಹುಬ್ಬಳ್ಳಿ: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿ ಯನ್‌ಷಿಪ್‌ನ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡದವರು ಚಾಂಪಿಯನ್‌ ಆದರು.

ಒಂದು ವಾರ ನಡೆದ ಜೂನಿಯರ್‌, ಸಬ್‌ ಜೂನಿಯರ್‌ ಮತ್ತು ಸೀನಿಯರ್‌ ವಿಭಾಗದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಒಟ್ಟು ಐದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗಳಿಸಿದರು. ಕೊನೆಯ ದಿನವಾದ ಶನಿವಾರ ಪದಕಗಳು ಒಲಿಯಲಿಲ್ಲ. ಜೂನಿಯರ್‌ ವಿಭಾಗದಲ್ಲಿ ರಾಜ್ಯ ತಂಡ ಒಟ್ಟು 35 ಪಾಯಿಂಟ್ಸ್‌ ಕಲೆ ಹಾಕಿತು.

ಕಳೆದ ಬಾರಿ ತಿರುವನಂತಪುರದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಎಂಟು ಪದಕಗಳನ್ನು ಜಯಿಸಿತ್ತು.

ಕಳೆದ ವರ್ಷಕ್ಕೆ ಹೋಲಿ ಸಿದರೆ ಈ ಬಾರಿ ಮೂರು ಪದಕಗಳು ಹೆಚ್ಚು ಬಂದಿವೆ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry