ಪಿಬಿಎಲ್‌: ಸಿಂಧು ಆಟಕ್ಕೆ ಒಲಿದ ಜಯ

7

ಪಿಬಿಎಲ್‌: ಸಿಂಧು ಆಟಕ್ಕೆ ಒಲಿದ ಜಯ

Published:
Updated:
ಪಿಬಿಎಲ್‌: ಸಿಂಧು ಆಟಕ್ಕೆ ಒಲಿದ ಜಯ

ಚೆನ್ನೈ: ಸಿಂಗಲ್ಸ್ ಹಾಗೂ ಮಿಶ್ರಡಬಲ್ಸ್ ಪಂದ್ಯಗಳಲ್ಲಿ ಜಯ ದಾಖಲಿಸಿದ ಭಾರತದ ಪಿ.ವಿ ಸಿಂಧು ಚೆನ್ನೈ ಸ್ಮ್ಯಾಷರ್ಸ್‌ ತಂಡಕ್ಕೆ ಗೆಲುವು ತಂದುಕೊಟ್ಟರು.

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪಂದ್ಯದಲ್ಲಿ ಶನಿವಾರ ಚೆನ್ನೈ ತಂಡ 2–1ರಲ್ಲಿ ಅಹಮದಾಬಾದ್ ಸ್ಮ್ಯಾಷ್‌ ಮಾಸ್ಟರ್ಸ್‌ಗೆ ಸೋಲುಣಿಸಿದೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯ ಆಡಿದ ಸಿಂಧು 15–11, 10–15, 15–12ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತೈ ಜು ಯಿಂಗ್ ವಿರುದ್ಧ ಗೆದ್ದರು. ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಿಂಧು ಜೋಡಿ ಗೆಲುವು ದಾಖಲಿಸುವ ಮೂಲಕ ಚೆನ್ನೈ ತಂಡದ ಮುನ್ನಡೆಗೆ ಕಾರಣವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry