ಗುರುವಾರ , ಆಗಸ್ಟ್ 13, 2020
27 °C

ಶವದ ಮೇಲೆ ರಾಜಕೀಯ ಬೇಡ, ಶಾಂತಿ ಕಾಪಾಡಿ: ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶವದ ಮೇಲೆ ರಾಜಕೀಯ ಬೇಡ, ಶಾಂತಿ ಕಾಪಾಡಿ: ಸಿಎಂ ಸಿದ್ದರಾಮಯ್ಯ

ಬೆಳ್ತಂಗಡಿ: ಮನುಷ್ಯತ್ವ ಇಲ್ಲದವರು, ಮನುಷ್ಯ ದ್ವೇಷಿಗಳು ಕೊಲ್ಲುತ್ತಾರೆ. ಯಾರೂ ಈ ವಿಚಾರದಲ್ಲಿ ಪ್ರಚೋದನೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಬೆಳ್ತಂಗಡಿಯಲ್ಲಿ ವಿವಿಧ ಯೋಜನೆ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ದೀಪಕ್‌ ರಾವ್‌ ಹತ್ಯೆ ಹಾಗೂ ಬಶೀರ್‌ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ಶವದ ಮೇಲೆ ರಾಜಕೀಯ ಮಾಡಬಾರದು. ಜನತೆ ಶಾಂತಿ ಕಾಪಾಡಬೇಕು ಎಂದರು.

ಇಲ್ಲಿನ ಸಮಾವೇಶದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಸಿಎಂ ಮನವಿಯಂತೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.

ಸಂಘ ಪರಿವಾರದವರೇ ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂದು ಅರಣ್ಯ ಸಚಿವ ರನಾನಾಥ ರೈ ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಸಿಎಂ ಮಾಧ್ಯಮದವರ ಜತೆಗೆ ಮಾತನಾಡುತ್ತಿದ್ದಾಗ ಮುಖ್ಯಮಂತ್ರಿ ಅವರ ಕಿವಿಯಲ್ಲಿ ಸಚಿವ ರೈ ಉಸುರಿದ ಮಾತು ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.