ಶನಿವಾರ, ಜೂಲೈ 4, 2020
21 °C

ಚೀನಾ ಕರಾವಳಿಯಲ್ಲಿ ಎರಡು ಹಡಗುಗಳ ಘರ್ಷಣೆ: 32 ಮಂದಿ ನಾಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೀನಾ ಕರಾವಳಿಯಲ್ಲಿ ಎರಡು ಹಡಗುಗಳ ಘರ್ಷಣೆ: 32 ಮಂದಿ ನಾಪತ್ತೆ

ಬೀಜಿಂಗ್‌: ಪೂರ್ವ ಚೀನಾ ಕರಾವಳಿ ಪ್ರದೇಶದಲ್ಲಿ ತೈಲ ಸಾಗಿಸುತ್ತಿದ್ದ ಹಡಗೊಂದು ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ 32 ಜನ ನಾಪತ್ತೆಯಾಗಿದ್ದಾರೆ ಎಂದು ಚೀನಾ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.

ನಾಪತ್ತೆಯಾದವರಲ್ಲಿ ಮೂವತ್ತು ಜನ ಇರಾನ್‌ ಹಾಗೂ ಇಬ್ಬರು ಬಾಂಗ್ಲಾದೇಶದ ಪ್ರಜೆಗಳು ಎನ್ನಲಾಗಿದೆ.

ಶನಿವಾರ ರಾತ್ರಿ ಘರ್ಷಣೆ ಸಂಭವಿಸಿದ್ದು ಹಡಗಿನಲ್ಲಿ 1.36 ಲಕ್ಷ ಟನ್‌ ತೂಕದ ತೈಲ ಸಾಗಿಸಲಾಗುತ್ತಿತ್ತು. ಇನ್ನೊಂದು ಹಡಗಿನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.