ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ ಗೋಮಾಂಸದ ಕೊರತೆ

ಗೋರಕ್ಷಕರಿಂದ ಹಲ್ಲೆಯ ಭೀತಿ
Last Updated 7 ಜನವರಿ 2018, 11:48 IST
ಅಕ್ಷರ ಗಾತ್ರ

ಪಣಜಿ: ಗೋರಕ್ಷಕರಿಂದ ಆಗುತ್ತಿರುವ ಹಲ್ಲೆಗಳನ್ನು ತಡೆಯುವವರೆಗೂ ಗೋಮಾಂಸ ಸರಬರಾಜು ಮಾಡುವುದಿಲ್ಲ ಎಂದು ಕರ್ನಾಟಕ ಮಾಂಸ ಮಾರಾಟಗಾರರು ಪಟ್ಟು ಹಿಡಿದಿದ್ದಾರೆ. ಇದರಿಂದ ಗೋವಾದಲ್ಲಿ ಕೆಲವು ದಿನಗಳವರೆಗೆ ಗೋಮಾಂಸದ ಕೊರತೆ ಉಂಟಾಗಲಿದೆ ಎಂದು ಗೋವಾದ ಅಧಿಕಾರಿಗಳು ತಿಳಿಸಿದ್ದಾರೆ.

ಅಖಿಲ ಗೋವಾ ಖುರೇಷಿ ಮಾಂಸದ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಮನ್ನ ಬೆಪಾರಿ, ‘ಗೋರಕ್ಷಕರಿಂದ ಆಗುತ್ತಿರುವ ಹಲ್ಲೆಗಳನ್ನು ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಗಮನಕ್ಕೆ ತಂದಿದ್ದೇವೆ. ಪೊಲೀಸರೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿಯವರು ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮಾಂಸ ಸರಬರಾಜು ಮತ್ತು ಮಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ’ ಎಂದರು.

‘ಬೆಳಗಾವಿಯಿಂದ ಪ್ರತಿದಿನ ಅಂದಾಜು 25 ಟನ್‌ನಷ್ಟು ಗೋಮಾಂಸ ಗೋವಾಕ್ಕೆ ಸರಬರಾಜು ಆಗುತ್ತದೆ. ಅಕ್ರಮ ಕಸಾಯಿಖಾನೆಗಳಿಂದ ರಾಜ್ಯಕ್ಕೆ ಮಾಂಸ ಬರುತ್ತಿದೆ ಎಂದೇಳಿ ಗೋ ರಕ್ಷಾ ಅಭಿಯಾನ್ ಸೇರಿದಂತೆ ಕೆಲವು ಸಂಘಟನೆಗಳು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸುತ್ತಿವೆ’ ಎಂದು ಬೆಪಾರಿ ಆರೋಪಿಸಿದರು.

‘ಗೋಮಾಂಸದ ಕೊರತೆಯಿಂದ ಮಟನ್‌ ಮತ್ತು ಚಿಕನ್‌ ಬೆಲೆಗಳು ಹೆಚ್ಚುತ್ತಿವೆ’ ಎಂದರು.

‘ಕರ್ನಾಟಕ–ಗೋವಾ ಗಡಿಯಲ್ಲಿ ಅಕ್ರಮ ಕಸಾಯಿಖಾನೆಗಳು ಸ್ಥಾಪನೆಯಾಗಿವೆ. ಹಾಗಾಗಿ ನಾವು ಪೊಲೀಸರ ಸಹಕಾರದೊಂದಿಗೆ ತಪಾಸಣೆ ಆರಂಭಿಸಿದ್ದೇವೆ’ ಎಂದು ಗೋ ರಕ್ಷಕ ಅಭಿಯಾನದ ಅಧ್ಯಕ್ಷ ಹನುಮಂತ್‌ ಪರಬ್‌ ಹೇಳಿದ್ದಾರೆ.

ಗೋವಾದ ನೆರೆಯ ರಾಜ್ಯ ಮಹಾರಾಷ್ಟದಲ್ಲಿ ಗೋಮಾಂಸ ಮಾರಾಟ ನಿಷೇಧಿಸಲಾಗಿದೆ.

––––––––––

The coastal state is facing a beef shortage with traders suspendings import of meat from Karnataka alleging harassment by cow vigilantes.

An association of traders earlier said its members have stopped procuringಸಂಗ್ರಹಿಸುವುದು beef from Belagavi in Karnataka.

All Goa Qureshi Meat Traders Association president Manna Bepari told PTI that Chief Minister Manohar Parrikar on Saturday assured them to discuss the issue with the police.

However, he said the chief minister is currently out of station and is expected to return only after two days.

"The suppliers from Karnataka have categorically said they will not resume supplies till action is taken against the so-called cow vigilantes," he said.

Bepari said they can expect some action only after the chief minister returns to the state, "so until then the supplies will not resumeಪುನರಾರಂಭಿಸು."

He said around 25 tonnes of beef is brought from Belagavi every day.

Cow protection groups, including the Gau Raksha Abhiyaan, have alleged beef in Goa is brought from illegal slaughter houses in Karnataka, a charge denied by Bepari.

He said non-availability of beef has resulted in a rise in the prices of mutton and chicken in the state.

Gau Raksha Abhiyaan leader Hanumant Parab earlier claimed cattle were being slaughtered in abattoirs across the border without approval from authorities.

"Due to this we have undertaken stringent checks (on the Goa-Karnataka border) along with police," he said.

Beef sale has been banned in Maharashtra, which also borders Goa.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT