ಮೂರನೇ ಮದುವೆ: ಅಲ್ಲಗಳೆದ ಇಮ್ರಾನ್‌

7

ಮೂರನೇ ಮದುವೆ: ಅಲ್ಲಗಳೆದ ಇಮ್ರಾನ್‌

Published:
Updated:

ಇಸ್ಲಾಮಾಬಾದ್‌ : ಆಧ್ಯಾತ್ಮ ಮಾರ್ಗದರ್ಶಕಿಯನ್ನು ಮದುವೆಯಾಗುವ ಪ್ರಸ್ತಾಪವಿದೆ. ಆದರೆ ಗುಪ್ತವಾಗಿ ಮದುವೆಯಾಗಿದ್ದೇನೆ ಎಂಬುದು ಸುಳ್ಳು ಸುದ್ದಿ ಎಂದು ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಇಮ್ರಾನ್‌ ಖಾನ್‌ ಅವರು  ಸ್ಪಷ್ಟಪಡಿಸಿದ್ದಾರೆ.

ಇಮ್ರಾನ್‌ ಅವರು ಹೊಸವರ್ಷದ ದಿನ ಮೂರನೇ ಮದುವೆಯಾಗಿದ್ದಾರೆ ಎಂಬ ವರದಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಬುಶ್ರಾ ಮನೇಕಾ ಅವರನ್ನು ಮದುವೆಯಾಗುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆಕೆಯ ಮಕ್ಕಳೂ ಸೇರಿದಂತೆ, ಕುಟುಂಬದವರ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದು ಇಮ್ರಾನ್‌ ಅವರ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry