ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಸ್‌ಎಸ್‌ ಕಾರ್ಯಕರ್ತರ ಬಂಧನ

Last Updated 8 ಜನವರಿ 2018, 8:41 IST
ಅಕ್ಷರ ಗಾತ್ರ

ಗೋಕಾಕ: ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದು ಹೇಳಿಕೆ ನೀಡಿರುವ ಕೇಂದ್ರ ಕೌಶಲಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ಸೇರಿದ್ದ ಡಿಎಸ್ಎಸ್ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭಾನುವಾರ ಬೆಳಿಗ್ಗೆ ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ವಶಕ್ಕೆ ಪಡೆದರು.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಶನಿವಾರ ರಾತ್ರಿಯೇ ನಗರಕ್ಕೆ ಆಗಮಿಸಿದ್ದ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ನಗರದ ಬಸವೇಶ್ವರ ವೃತ್ತದಲ್ಲಿ ನೂರಾರು ಡಿಎಸ್ಎಸ್ ಕಾರ್ಯಕರ್ತರು ಸೇರಿದ್ದರು.

ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಘೋಷಣೆ ಕೂಗತೊಡಗಿದಾಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಪ್ರತಿಭಟನೆ ನಡೆಸುತ್ತಿದ್ದ ದಲಿತರನ್ನು ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ರಮೇಶ ಮಾದರ, ಸತ್ಯಜೀತ ಕರವಾಡಿ, ಕಾಡಪ್ಪ ಮೇಸ್ತ್ರಿ, ಲಕ್ಷ್ಮಣ ತೆಳಗಡೆ, ರಮೇಶ ಸಣ್ಣಕ್ಕಿ, ಸುಧಾ ಮುರಕುಂಬಿ, ವೀರಭದ್ರ ಮೈಲನ್ನವರ, ಬಾಳೇಶ ಸಂತವ್ವಗೋಳ, ಈರಪ್ಪ ಈರಗಾರ, ಗೋವಿಂದ ಕಳ್ಳೀಮನಿ, ಸಿದ್ದು ಕನಮಡಿ, ಮಂಜುಳಾ ರಾಮಗಾನಟ್ಟಿ, ಸುರೇಶ ಸಣ್ಣಕ್ಕಿ, ಶಾಬು ಸನ್ನಕ್ಕಿ, ಶಿವಾನಂದ ಹೊಸಮನಿ, ಬಬಲೆಪ್ಪ ಮಾದರ, ದುರ್ಗೇಶ್ ಮೇತ್ರಿ, ದೊಡ್ಡವ್ವ ತೆಳಗೇರಿ, ರವಿ ಕಡಕೋಳ, ಬಸು ಮೇಸ್ತ್ರಿ, ಬೀರಪ್ಪ ಮೈಲನ್ನವರ ಸೇರಿದಂತೆ ಒಟ್ಟು 110 ಜನರನ್ನು ಪೋಲೀಸರು ವಶಕ್ಕೆ ಪಡೆದು, ಸಂಜೆಗೆ ಬಿಡುಗಡೆಗೊಳಿಸಿದರು.

ದಲಿತರು ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಾರೆಂಬ ವಿಷಯ ಮೊದಲೇ ತಿಳಿದಿದ್ದ ಪೊಲೀಸ್‌ ಇಲಾಖೆ, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಡಿ.ಟಿ.ಪ್ರಭು, ಸಿಪಿಐಗಳಾದ ಎಸ್.ಆರ್. ಕಟ್ಟೀಮನಿ, ವೆಂಕಟೇಶ ಮುರನಾಳ, ಎಸ್‌.ಐ.ಗಳಾದ ಆರ್.ಎಸ್.ಜಾನಾರ ಹಾಗೂ ದೇವಾನಂದ ಬಿಗಿ ಪೊಲೀಸ್‌ ಪಹರೆಯ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT