ಬುಧವಾರ, ಜೂಲೈ 8, 2020
23 °C

ಪತ್ನಿ ರಿಮೋಟ್‌ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತಿರಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪತ್ನಿ ರಿಮೋಟ್‌ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತಿರಾಯ

ಭೋಪಾಲ್‌: ಪತ್ನಿ ಟಿವಿ ರಿಮೋಟ್‌ ನೀಡಲು ನಿರಾಕರಿಸಿದ ಕಾರಣ ಇಲ್ಲಿನ ಅಶೋಕ ಗಾರ್ಡನ್‌ ನಿವಾಸಿ ಶಂಕರ್‌ ವಿಶ್ವಕರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಸಣ್ಣ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಂಕರ್‌, ಸಾವಿಗೂ ಮುನ್ನ ಯಾವುದೇ ಮರಣ ಪತ್ರ ಬರೆದಿಲ್ಲ’ ಎಂದು ತನಿಖಾಧಿಕಾರಿ ಎಎಸ್‌ಐ ಅಶೋಕ್‌ ಸಿಂಗ್‌ ಹೇಳಿದ್ದಾರೆ.

ಮದ್ಯಪಾನ ವ್ಯಸನಿಯಾಗಿದ್ದ ಶಂಕರ್‌ ಸಣ್ಣಪುಟ್ಟ ವಿಚಾರಗಳನ್ನೂ ದೊಡ್ಡದಾಗಿ ತೆಗೆದುಕೊಳ್ಳುತ್ತಿದ್ದರು ಎಂದು ಆತನ ಕುಟುಂಬದವರು ತನಿಖೆ ವೇಳೆ ತಿಳಿಸಿದ್ದಾರೆ.

‘ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಆತ ಕುಟುಂಬದವರೊಡನೆ ಊಟ ಮಾಡಿ ಬಳಿಕ ಟಿವಿ ನೋಡುತ್ತಿದ್ದ. ಈ ವೇಳೆ ಪತ್ನಿಯನ್ನು ಟಿವಿ ರಿಮೋಟ್‌ ನೀಡುವಂತೆ ಕೇಳಿದ್ದ. ಆದರೆ, ರಿಮೋಟ್‌ ನೀಡಲು ನಿರಾಕರಿಸಿದ ಪತ್ನಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಬಳಿಕ ಮತ್ತೊಂದು ಕೊಠಡಿಗೆ ತೆರಳಿದ ಶಂಕರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತನಿಖೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ಸಮಯದ ನಂತರ ಹೆಂಡತಿ ಕೊಠಡಿ ಪ್ರವೇಶಿಸಿದಾಗ ಶಂಕರ್‌ ಸೀಲಿಂಗ್‌ ಫ್ಯಾನ್‌ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅವರು ಕೂಡಲೇ ವಿಷಯವನ್ನು ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಶೋಕ್‌ ಸಿಂಗ್‌ ಹೇಳಿದರು.

ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.