ಸ್ಟೀಫನ್ಸ್‌ಗೆ ಸೋಲುಣಿಸಿದ ಕ್ಯಾಮಿಲಾ

7
ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್ ಟೂರ್ನಿ

ಸ್ಟೀಫನ್ಸ್‌ಗೆ ಸೋಲುಣಿಸಿದ ಕ್ಯಾಮಿಲಾ

Published:
Updated:
ಸ್ಟೀಫನ್ಸ್‌ಗೆ ಸೋಲುಣಿಸಿದ ಕ್ಯಾಮಿಲಾ

ಸಿಡ್ನಿ (ರಾಯಿಟರ್ಸ್‌): ಇಟಲಿಯ ಕ್ಯಾಮಿಲಾ ಗಾರ್ಗಿ ಅಮೆರಿಕ ಓಪನ್‌ ಚಾಂಪಿಯನ್‌ ಸೊಲಾನೆ ಸ್ಟೀಫನ್ಸ್‌ ಅವರಿಗೆ ಸೋಲುಣಿಸುವ ಮೂಲಕ ಸಿಡ್ನಿ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯಾಮಿಲಾ 6–3, 6–0ರಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಸಿದ್ಧತೆ ನಡೆಸಿರುವ ಸ್ಟೀಫನ್ಸ್ ಅವರಿಗೆ ಆಘಾತ ನೀಡಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಫೆಡ್‌ ಕಪ್ ಆಡಿದ್ದ ಸ್ಟೀಫನ್ಸ್ ಬಳಿಕ ಯಾವುದೇ ಟೂರ್ನಿಯಲ್ಲಿ ಕಣಕ್ಕಿಳಿದಿರಲಿಲ್ಲ. ಕ್ಯಾಮಿಲಾ ಎದುರಿನ ಪಂದ್ಯದಲ್ಲಿ 35 ಅನಗತ್ಯ ತಪ್ಪುಗಳನ್ನು ಎಸಗಿರುವ ಅವರು ಒಂದು ತಾಸಿನ ಪಂದ್ಯದಲ್ಲಿ 26 ವರ್ಷದ ಆಟಗಾರ್ತಿ ಎದುರು ಸೋತಿದ್ದಾರೆ.

ಮೆಡವ್ಸ್‌ ಟೂರ್ನಿಯಲ್ಲಿ ಮ್ಯಾಡಿಸನ್ ಕೀಸ್‌ ಅವರನ್ನು ಮಣಿಸಿದ ಬಳಿಕ ಸ್ಟೀಫನ್ಸ್ ಸತತ ಸೋಲು ಎದುರಿಸಿದ್ದಾರೆ. ಫೆಡ್‌ ಕಪ್‌ನಲ್ಲಿಯೂ ಅವರು ಆರಂಭಿಕ ಸುತ್ತಿನಲ್ಲಿಯೇ ಸೋತಿದ್ದರು. ಗಾರ್ಗಿ ಮುಂದಿನ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರೊಂದಿಗೆ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry