ಸೋಮವಾರ, ಆಗಸ್ಟ್ 10, 2020
23 °C

ಹಾಕಿ: ಗೋಲಿನ ಮಳೆ ಸುರಿಸಿದ ಬೆಂಗಳೂರು ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಫಾಲ (ಪಿಟಿಐ): ಬೆಂಗಳೂರು ಹಾಕಿ ಸಂಸ್ಥೆ ತಂಡದವರು 8ನೇ ರಾಷ್ಟ್ರೀಯ ಸೀನಿಯರ್‌ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನ ‍ ಸೋಮವಾರದ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿದರು.

‘ಇ’ ಗುಂಪಿನ ಹಣಾಹಣಿಯಲ್ಲಿ ಬೆಂಗಳೂರಿನ ತಂಡ 15–0 ಗೋಲು ಗಳಿಂದ ಹಾಕಿ ಬಿಹಾರ ವಿರುದ್ಧ ಜಯಭೇರಿ ಮೊಳಗಿಸಿತು.

ಬೆಂಗಳೂರು ತಂಡದ ಎಚ್‌.ಟಿ. ರಮೇಶ್‌ 5, 53, 55, 57 ಮತ್ತು 59ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಸಿ.ಸ್ಟಾಲಿನ್‌ ಅಭಿಲಾಷ್‌ 27, 29, 39 ಮತ್ತು 56ನೇ ನಿಮಿಷಗಳಲ್ಲಿ ಎದುರಾಳಿಗಳ ರಕ್ಷಣಾಕೋಟೆ ಭೇದಿಸಿದರು. ಮಣಿಕಂಠ ಬೇಜವಾಡ (12, 41, 48) ಮತ್ತು ಎನ್‌. ಹೊನ್ನೂರು ಸ್ವಾಮಿ (13, 22,37ನೇ ನಿಮಿಷ) ಕೂಡ ಗೋಲು ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.