ಬುಧವಾರ, ಜೂಲೈ 8, 2020
23 °C

‘ಗೋಲ್ಡನ್ ಗ್ಲೋಬ್’ ಗೆದ್ದ ಭಾರತ ಸಂಜಾತ

ಪಿಟಿಐ Updated:

ಅಕ್ಷರ ಗಾತ್ರ : | |

‘ಗೋಲ್ಡನ್ ಗ್ಲೋಬ್’ ಗೆದ್ದ ಭಾರತ ಸಂಜಾತ

ಲಾಸ್ ಏಂಜಲೀಸ್: ಭಾರತ ಸಂಜಾತರಾದ ಅಮೆರಿಕದ ನಟ ಅಜೀಜ್ ಅನ್ಸಾರಿ (34) ಅವರು ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನ ‘ಸಂಗೀತ/ ಹಾಸ್ಯ ಟಿ.ವಿ ಸರಣಿ’ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪ್ರಶಸ್ತಿ ಪಡೆದ ಏಷ್ಯಾದ ಮೊದಲಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತಮ್ಮ ಅಭಿನಯದ ‘ದಿ ಮಾಸ್ಟರ್ ಆಫ್ ನನ್’ ಸರಣಿಗೆ ಈ ಗೌರವ ಪಡೆದಿದ್ದಾರೆ.

‘ಈ ಪ್ರಶಸ್ತಿ ನನ್ನದಾಗುತ್ತದೆ ಎಂಬ ನಂಬಿಕೆ ನಿಜಕ್ಕೂ ಇರಲಿಲ್ಲ. ಹಲವು ಜಾಲತಾಣಗಳು ಹೇಳಿದಂತೆ ನಾನು ಸೋಲುತ್ತೇನೆ ಎಂದೇ ಭಾವಿಸಿದ್ದೆ. ಎರಡು ಬಾರಿ ಪ್ರಶಸ್ತಿ ಕೈತಪ್ಪಿದಾಗ ಕುಗ್ಗಿದ್ದೆ. ಈ ಬಾರಿ ಸಂತಸವಾಗಿದೆ. ನನ್ನ ನಟನೆ ಚೆನ್ನಾಗಿರುವ ಕಾರಣಕ್ಕೆ ಮಾತ್ರ ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಅಜೀಜ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಥ್ರೀ ಬಿಲ್‌ಬೋರ್ಡ್ಸ್‌...’ ‘ಅತ್ಯುತ್ತಮ ಚಿತ್ರ (ನಾಟಕ)’ ಪ್ರಶಸ್ತಿ ಗೆದ್ದುಕೊಂಡಿದೆ. ಸಂಗೀತ/ ಹಾಸ್ಯ ಚಲನಚಿತ್ರ ವಿಭಾಗದಲ್ಲಿ ‘ದಿ ಡಿಸಾಸ್ಟರ್ ಆರ್ಟಿಸ್ಟ್’ ಚಿತ್ರದ ನಾಯಕ ಜೇಮ್ಸ್ ಫ್ರಾಂಕೊ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

‘ದಿಸ್ ಈಸ್ ಅಸ್’ ಚಿತ್ರದ ನಟ ಸ್ಟರ್ಲಿಂಗ್ ಕೆ. ಬ್ರೌನ್ ಅವರು ಅತ್ಯುತ್ತಮ ನಟ (ನಾಟಕ) ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಪ್ರಶಸ್ತಿ ಪಡೆದ ಮೊದಲ ಆಫ್ರಿಕನ್–ಅಮೆರಿಕನ್ ಎಂಬ ಐತಿಹಾಸಿಕ ಕ್ಷಣಕ್ಕೆ ಅವರು ಸಾಕ್ಷಿಯಾದರು.

ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು, ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸ್ಟೀವನ್ ಸ್ಪೀಲ್‌ಬರ್ಗ್ ಅವರ ‘ದಿ ಪೋಸ್ಟ್’, ಜೋರ್ಡನ್ ಪೀಲೆ ಅವರ ‘ಗೆಟ್ ಔಟ್’ ಹಾಗೂ ‘ಕಾಲ್ ಮಿ ಬೈ ಯುವರ್ ನೇಮ್’ ಚಿತ್ರಗಳು ಯಾವುದೇ ಪ್ರಶಸ್ತಿ ಪಡೆಯಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.