ವಿಮಾನಯಾನದ ಮಾರ್ಗ ಮಧ್ಯೆ ಪೈಲೆಟ್‌ಗಳ ಕಿತ್ತಾಟ: ಸೇವೆಯಿಂದ ಕಾಕ್‌ಪಿಟ್‌ ಸಿಬ್ಬಂದಿ ವಜಾಗೊಳಿಸಿದ ಜೆಟ್‌ ಏರ್‌ವೇಸ್‌

7

ವಿಮಾನಯಾನದ ಮಾರ್ಗ ಮಧ್ಯೆ ಪೈಲೆಟ್‌ಗಳ ಕಿತ್ತಾಟ: ಸೇವೆಯಿಂದ ಕಾಕ್‌ಪಿಟ್‌ ಸಿಬ್ಬಂದಿ ವಜಾಗೊಳಿಸಿದ ಜೆಟ್‌ ಏರ್‌ವೇಸ್‌

Published:
Updated:
ವಿಮಾನಯಾನದ ಮಾರ್ಗ ಮಧ್ಯೆ ಪೈಲೆಟ್‌ಗಳ ಕಿತ್ತಾಟ: ಸೇವೆಯಿಂದ ಕಾಕ್‌ಪಿಟ್‌ ಸಿಬ್ಬಂದಿ ವಜಾಗೊಳಿಸಿದ ಜೆಟ್‌ ಏರ್‌ವೇಸ್‌

ನವದೆಹಲಿ: ಲಂಡನ್‌–ಮುಂಬೈ ವಿಮಾನ ಯಾನದಲ್ಲಿ ಮಾರ್ಗ ಮಧ್ಯೆ ಕಿತ್ತಾಡಿಕೊಂಡ ಜೆಟ್‌ ಏರ್‌ವೇಸ್‌ನ ಇಬ್ಬರು ಹಿರಿಯ ಪೈಲೆಟ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಜನವರಿ 1ರಂದು 9ಡಬ್ಲ್ಯು119 ಲಂಡನ್‌–ಮುಂಬೈ ವಿಮಾನದಲ್ಲಿ ಸೇವೆಯಲ್ಲಿದ್ದ ಹಿರಿಯ ಪೈಲೆಟ್‌ ಹಾಗೂ ಮಹಿಳಾ ಕಮಾಂಡರ್‌ ನಡುವೆ ಮಾತಿಗೆ ಮಾತು ಬೆಳೆದು ಆಕೆಯ ಕೆನ್ನೆಗೆ ಹೊಡೆದಿದ್ದರು. ಕಣ್ಣೀರು ಹಾಕುತ್ತ ಆಕೆ ಕಾಕ್‌ಪಿಟ್‌ನಿಂದ ಹೊರಬಂದಿದ್ದರು.

ಪ್ರಯಾಣಿಕರ ಸುರಕ್ಷತೆಗೆ ಹಾನಿಯಾಗಬಹುದಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಕಾಕ್‌ಪಿಟ್ ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ಜೆಟ್‌ ಏರ್‌ವೇಸ್‌ನ ವಕ್ತಾರ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಬ್ಬರೂ ಪೈಲೆಟ್‌ಗಳ ನಡುವೆ ಮನಸ್ತಾಪದ ಕಾರಣದಿಂದ ನಡೆದ ಜಗಳದ ಪರಿಣಾಮವಾಗಿ ಪುರುಷ ಪೈಲೆಟ್‌ನ ವಿಮಾನ ಹಾರಾಟದ ಪರವಾನಗಿಯನ್ನೂ ಅಮಾನತಿನಲ್ಲಿ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry