ಎಲ್ಲ ಸಿಬ್ಬಂದಿ ಮಹಿಳೆಯರೇ!: ಗಿನ್ನೆಸ್ ದಾಖಲೆಗೆ ಮಾತುಂಗ ರೈಲ್ವೆ ನಿಲ್ದಾಣ

7

ಎಲ್ಲ ಸಿಬ್ಬಂದಿ ಮಹಿಳೆಯರೇ!: ಗಿನ್ನೆಸ್ ದಾಖಲೆಗೆ ಮಾತುಂಗ ರೈಲ್ವೆ ನಿಲ್ದಾಣ

Published:
Updated:

ಮುಂಬೈ: ಇಲ್ಲಿನ ಉಪನಗರ ಮಾತುಂಗ ರೈಲ್ವೆ ನಿಲ್ದಾಣಕ್ಕೆ ಎಲ್ಲ ಮಹಿಳಾ ಸಿಬ್ಬಂದಿಯೇ ನೇಮಕಗೊಂಡಿದ್ದು, ಈ ನಿಲ್ದಾಣ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಇಲ್ಲಿನ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಆಗಿದ್ದು, ಈ ಸಾಧನೆ ಮಾಡಿದ ದೇಶದ ಮೊಲದ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಮಾತುಂಗ ರೈಲ್ವೆ ನಿಲ್ದಾಣ  ಪಾತ್ರವಾಗಿತ್ತು. ಇದಾದ ಆರು ತಿಂಗಳ ಬಳಿಕ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.

ಮಹಿಳೆಯರ ಸಬಲೀಕರಣ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡ ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಡಿ.ಕೆ. ಶರ್ಮಾ ಅವರಿಗೆ ಈ ಗೌರವ ಸಲ್ಲಬೇಕು ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಸ್ಟೇಷನ್ ಮ್ಯಾನೇಜರ್ ಮಮತಾ ಕುಲಕರ್ಣಿ ಅವರು ನಿಲ್ದಾಣದ ನೇತೃತ್ವದಲ್ಲಿ ನಿಲ್ದಾಣದ ಎಲ್ಲ ವಿಭಾಗಗಳಿಂದ 41 ಮಹಿಳಾ ಸಿಬ್ಬಂದಿ ಇಲ್ಲಿ ನಿತ್ಯ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry