ಐಫೋನ್‌ ಬ್ಯಾಟರಿ ಸ್ಫೋಟ: ವ್ಯಕ್ತಿಗೆ ಗಾಯ

7

ಐಫೋನ್‌ ಬ್ಯಾಟರಿ ಸ್ಫೋಟ: ವ್ಯಕ್ತಿಗೆ ಗಾಯ

Published:
Updated:
ಐಫೋನ್‌ ಬ್ಯಾಟರಿ ಸ್ಫೋಟ: ವ್ಯಕ್ತಿಗೆ ಗಾಯ

ಜುರಿಚ್‌: ಐಫೋನ್‌ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿ ಗಾಯಗೊಂಡಿರುವ ಘಟನೆ ಜುರಿಚ್‌ನಲ್ಲಿ ನಡೆದಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ಸ್ಫೋಟದ ಬಳಿಕ ಮೊಬೈಲ್‌ ಅಂಗಡಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

‘ಮೊಬೈಲ್‌ ರಿಪೇರಿ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ರಿಪೇರಿ ಮಾಡುತ್ತಿದ್ದ ವ್ಯಕ್ತಿಯ ಕೈಗೆ ಗಾಯವಾಗಿದೆ. ಜತೆಗೆ, ಸ್ಥಳದಲ್ಲಿದ ಇತರ ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry