ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಿ ಹಸ್ತಾಂತರಕ್ಕೆ ಮನವಿ ಸಾಧ್ಯತೆ

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್: ಹತ್ತು ವರ್ಷಗಳ ಹಿಂದೆ ಇಲ್ಲಿ ಕಾರು ಗುದ್ದಿಸಿ ಪಲಾಯನ ಮಾಡಿದ್ದ ಭಾರತ ಸಂಜಾತ ಚಾಲಕನನ್ನು ಆಸ್ಟ್ರೇಲಿಯಾಕ್ಕೆ ಒಪ್ಪಿಸಬೇಕು ಎಂದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಧಾನಿ ಡೇನಿಯಲ್ ಆ್ಯಂಡ್ರೂಸ್ ಭಾರತಕ್ಕೆ ಮನವಿ ಮಾಡಲಿದ್ದಾರೆ.

2008ರ ಅಕ್ಟೋಬರ್ 1ರಂದು ನಡೆದ ಕಾರು ಅಪಘಾತದಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದ ಹಾಗೂ ಮತ್ತೊಬ್ಬ ಗಾಯ
ಗೊಂಡಿದ್ದ. ಅಮಲಿನಲ್ಲಿದ್ದ ಭಾರತದ ವಿದ್ಯಾರ್ಥಿ ಪುನೀತ್ (ಆಗ 19 ವರ್ಷ) ಕಾರು ಗುದ್ದಿಸಿ ಓಡಿಹೋಗಿದ್ದ.

ವಿಚಾರಣೆಯಲ್ಲಿ ಪುನೀತ್ ಅಪರಾಧಿ ಎಂದು ತೀರ್ಮಾನವಾಗಿ, ಶಿಕ್ಷೆ ಪ್ರಕಟವಾಗುವುದು ಬಾಕಿ ಇತ್ತು. ಆದರೆ ಸ್ನೇಹಿತನ ಪಾಸ್‌ಪೋರ್ಟ್ ಬಳಸಿಕೊಂಡು ಪುನೀತ್ 2009ರಲ್ಲಿ ಭಾರತಕ್ಕೆ ಬಂದಿದ್ದ. 2013ರ ನವೆಂಬರ್ 29ರಂದು ಈತನನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿತ್ತು.

‘ಇದು ಕ್ಷಮೆ ವಿಷಯವಲ್ಲ. ಕುಟುಂಬಕ್ಕೆ ನ್ಯಾಯ ಒದಗಿಸುವ ವಿಚಾರ’ ಎಂದು ಡೇನಿಯಲ್ ಅವರ ಕಚೇರಿ ಹೇಳಿಕೆ ನೀಡಿದೆ.

‘ಪುನೀತ್ ಆಸ್ಟ್ರೇಲಿಯಾದಲ್ಲಿ ಶಿಕ್ಷೆ ಅನುಭವಿಸಬೇಕು’ ಎಂದು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ಸಂದರ್ಭ
ದಲ್ಲಿ ಅವರು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ. ಆಸ್ಟ್ರೇಲಿಯಾ ಕಾನೂನಿನ ಪ್ರಕಾರ ಪುನೀತ್ ಅಪರಾಧಕ್ಕೆ 20 ವರ್ಷಗಳ ಶಿಕ್ಷೆ ಆಗಲಿದೆ.

‘ಆಸ್ಟ್ರೇಲಿಯಾದ ಜೈಲಿಗೆ ನನ್ನನ್ನು ಹಸ್ತಾಂತರಿಸಿದರೆ ತೀವ್ರ ಜನಾಂಗೀಯ ಶೋಷಣೆ ಮತ್ತು ಹಿಂಸೆಗೆ ಗುರಿಯಾಗುತ್ತೇನೆ’ ಎಂದು ಪುನೀತ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT