ಬಜಾಜ್‌: ಎರಡು ಹೊಸ ಬೈಕ್‌

7

ಬಜಾಜ್‌: ಎರಡು ಹೊಸ ಬೈಕ್‌

Published:
Updated:
ಬಜಾಜ್‌: ಎರಡು ಹೊಸ ಬೈಕ್‌

ನವದೆಹಲಿ: ಬಜಾಜ್‌ ಆಟೊ ಕಂಪನಿಯು ಡಿಸ್ಕವರ್‌ 110 ಮತ್ತು ಡಿಸ್ಕವರ್‌ 125 ಎಂಬ ಎರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಎಕ್ಸ್‌ ಷೋರೂಂ ಬೆಲೆ ₹ 50,496 ಮತ್ತು ₹ 56,314 ಇದೆ.

ಡಿಸ್ಕವರ್‌ 110 ಮಾದರಿಯು  115.5 ಸಿಸಿ ಎಂಜಿನ್‌ ಹೊಂದಿದೆ. ಡಿಸ್ಕವರ್ 125 ಮಾದರಿ 124.5 ಸಿಸಿ ಎಂಜಿನ್ ಹೊಂದಿದೆ.

‘100 ರಿಂದ 125 ಸಿಸಿ ವಿಭಾಗದಲ್ಲಿ ಈ ಎರಡೂ ಹೊಸ ಮಾದರಿಗಳು ಗ್ರಾಹಕರಿಗೆ ಪ್ರೀಮಿಯಂ ಅನುಭವ ತಂದುಕೊಡಲಿವೆ’ ಎಂದು ಬಜಾಜ್ ಆಟೊ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನದ ಬಳಕೆ ಬಗ್ಗೆ ಆಸಕ್ತಿ ಇರುವ ಹೊಸ ಗ್ರಾಹಕರನ್ನೂ ಆಕರ್ಷಿಸಲಿದೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry