ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀ ಖರೀದಿ ನಿಯಮ ಸಡಿಲ

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಏಕ ಬ್ರ್ಯಾಂಡ್‌ ಚಿಲ್ಲರೆ ಮಾರಾಟದಲ್ಲಿ ಈತನಕ ಶೇ 49ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಸರ್ಕಾರದ ಅನುಮತಿ ಬೇಕಿರಲಿಲ್ಲ. ಈಗ ಅದನ್ನು ಶೇ ನೂರಕ್ಕೆ ಏರಿಸಲಾಗಿದೆ. ನಿರುದ್ಯೋಗ ನಿವಾರಣೆಗಾಗಿ ಮತ್ತು ಕುಂಠಿತಗೊಂಡಿರುವ ಆರ್ಥಿಕ ಪ್ರಗತಿಗೆ ಪುನಶ್ಚೇತನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಏಕ ಬ್ರ್ಯಾಂಡ್‌ ಚಿಲ್ಲರೆ ಮಾರಾಟ ಸಂಸ್ಥೆಗಳು ಶೇ 30ರಷ್ಟು ಸರಕುಗಳನ್ನು ಭಾರತದಲ್ಲಿಯೇ ಖರೀದಿ ಮಾಡಬೇಕು ಎಂಬ ನಿಯಮ ಹಿಂದೆ ಇತ್ತು. ಆ ನಿಯಮವನ್ನು ಈಗ ಸಡಿಲಿಸಲಾಗಿದೆ. ಈ ನಿಯಮದಿಂದಾಗಿ ಎಫ್‌ಡಿಐ ಪ್ರಕ್ರಿಯೆ ನಿಧಾನಗೊಂಡಿತ್ತು.

ಈಗ, ಸ್ಥಳೀಯವಾಗಿ ಶೇ 30ರಷ್ಟು ಸರಕುಗಳ ಖರೀದಿ ಬದಲಿಗೆ ಈ ಕಂಪನಿಗಳು ತಮ್ಮ ಜಾಗತಿಕ ವಹಿವಾಟಿನಲ್ಲಿ ಭಾರತದ ಸರಕುಗಳ ಮಾರಾಟ ಮಾಡಬೇಕು. ಜತೆಗೆ, ಹೀಗೆ ಖರೀದಿಸುವ ಸರಕುಗಳ ಪ್ರಮಾಣ ಪ್ರತಿ ವರ್ಷ ಏರಿಕೆಯಾಗಬೇಕು ಎಂಬ ನಿಯಮ ಸೇರಿಸಲಾಗಿದೆ. ಭಾರತದಲ್ಲಿ ವಹಿವಾಟು ಆರಂಭಿಸಿ ಐದು ವರ್ಷ ಪೂರ್ಣಗೊಂಡ ಬಳಿಕ ಕಂಪನಿಯು ಒಟ್ಟು ಮಾರಾಟದ ಶೇ 30ರಷ್ಟು ಸರಕುಗಳನ್ನು ಭಾರತದಿಂದ ಖರೀದಿ ಮಾಡಬೇಕು.

ಈ ನಿರ್ಧಾರವು ಸುಲಲಿತ ವ್ಯಾಪಾರಕ್ಕೆ ನೆರವಾಗಲಿದೆ. ಅನುಮೋದನೆಗಾಗಿ ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ. ಆದರೆ, ಏಕ ಬ್ರ್ಯಾಂಡ್‌ನ ದೊಡ್ಡ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಇದರಿಂದ ಪ್ರಯೋಜನ ದೊರೆಯಬಹುದು ಎಂಬ ಆತಂಕವನ್ನೂ ಸಿಎಐಟಿ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT