ಶುಕ್ರವಾರ, 26 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸರತ್ತೇ ಉಸಿರು; ಹಗ್ಗದ ಮೇಲಿನ ನಡಿಗೆ ಇವರ ಬದುಕು

Last Updated 11 ಜನವರಿ 2018, 12:26 IST
ಅಕ್ಷರ ಗಾತ್ರ

ನವಲಗುಂದ: ಒಂದು ಹೊತ್ತಿನ ಊಟಕ್ಕಾಗಿ ಏನೆಲ್ಲಾ ಕಷ್ಟಪಡಬೇಕು ನೋಡಿ. ಎಲ್ಲಾ ಕಸರತ್ತುಗಳು ಗೇಣೊಟ್ಟೆ ತುಂಬಿಸಿಕೊಂಡು ಬದುಕಿನ ಬಂಡಿ ಎಳೆಯಲು...

ಹೊರರಾಜ್ಯ ಛತ್ತಿಸಗಡದ ಬಿಲಾಸಪುರದಿಂದ ಬದುಕಿನ ಬಂಡಿ ಎಳೆಯಲು ಕುಟುಂಬವೊಂದು ಇಲ್ಲಿಗೆ ಬಂದಿದೆ. ಈ ಕುಟುಂಬದ ಬಾಲಕಿಯೊಬ್ಬಳು ಇಲ್ಲಿನ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿನ ಮುಂದೆ ವಿವಿಧ ಬಗೆಯ ಕಸರತ್ತು ಪ್ರದರ್ಶನ ಮಾಡುತ್ತಿರುವುದನ್ನು ಕಂಡು ಎಲ್ಲರು ಅಚ್ಚರಿ ಪಡುವಂತಾಯಿತು.

ಹಾಡಿಗೆ ತಕ್ಕಂತೆ ಬಾಲಕಿ ಹಗ್ಗದ ಮೇಲೆ ಒಂದೊಂದು ಕಸರತ್ತನ್ನು ಪ್ರದರ್ಶಿಸಿದ್ದನ್ನು ನೋಡಿದರೆ ಎಲ್ಲಿ ಕೆಳಗೆ ಬೀಳುತ್ತಾಳೊ ಎಂಬ ಭಯ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿತ್ತು.

–ಪ್ರಜಾವಾಣಿ ವಿಡಿಯೊ

ತಲೆಯ ಮೇಲೆ ಪೇರಿಸಿಟ್ಟ ಬಿಂದಿಗೆಗಳು, ಕೈಯಲ್ಲಿ ಕೋಲು ಹಿಡಿದು ಸಮತೋಲನ ಮಾಡಿ ಹಗ್ಗದ ಮೇಲೆ ಆ ಬಾಳೆ ಕಸರತ್ತು ಪ್ರದರ್ಶಿಸಿ ನೆರೆದವರ ಮನ ಗೆದ್ದಳು.

ಬಾಲಕಿಯ ಕಸರತ್ತನ್ನು ಮೆಚ್ಚಿ ಎಷ್ಟೊ ಜನರು ನೀಡುವ ಹಣದಲ್ಲಿಯೇ ಇವರ ಕುಟುಂಬ ನಿರ್ವಹಣೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT