ಬಿಲಿಯರ್ಡ್ಸ್‌: ರೂಪೇಶ್‌ ಗೆಲುವಿನ ಓಟ

7

ಬಿಲಿಯರ್ಡ್ಸ್‌: ರೂಪೇಶ್‌ ಗೆಲುವಿನ ಓಟ

Published:
Updated:
ಬಿಲಿಯರ್ಡ್ಸ್‌: ರೂಪೇಶ್‌ ಗೆಲುವಿನ ಓಟ

ಬೆಂಗಳೂರು: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ರೂಪೇಶ್‌ ಷಾ, ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಕೆಎಸ್‌ಬಿಎ ಹಾಲ್‌ನಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಪಿಎಸ್‌ಪಿಬಿ ತಂಡದ ರೂಪೇಶ್‌ 3–1 ಫ್ರೇಮ್‌ಗಳಿಂದ ಮಧ್ಯಪ್ರದೇಶದ ಸಿದ್ದಾರ್ಥ್‌ ಪಾಟ್ನಿ ಅವರನ್ನು ಮಣಿಸಿದರು.

ಇದೇ ಗುಂಪಿನ ಇನ್ನೊಂದು ಪಂದ್ಯ ದಲ್ಲಿ ಕರ್ನಾಟಕದ ಸತೀಶ್‌ ಕುಮಾರ್‌ ಅಮೃತ್‌ 3–0ರಲ್ಲಿ ಉತ್ತರಾಖಂಡದ ಲಕ್ಷ್ಯ ಸೂದಿ ಅವರನ್ನು ಸೋಲಿಸಿದರು.

ಪಂಕಜ್‌ಗೆ ಜಯ: ಕರ್ನಾಟಕದ ಪಂಕಜ್‌ ಅಡ್ವಾಣಿ ‘ಎ’ ಗುಂಪಿನ ಪಂದ್ಯದಲ್ಲಿ 100–30, 100–0, 101–10ರಲ್ಲಿ ತೆಲಂಗಾಣದ ಮುನೀಮ್‌ ವಿರುದ್ಧ ಗೆದ್ದರು.

ಮತ್ತೊಂದು ಹೋರಾಟದಲ್ಲಿ ರೈಲ್ವೇಸ್‌ನ ದುರ್ಗಪ್ರಸಾದ್‌ 3–0ರಲ್ಲಿ ಬಿಹಾರದ ತುಷಾರ್‌ ಶ್ರೇಷ್ಠ ವಿರುದ್ಧ ವಿಜಯಿಯಾದರು.

ಕರ್ನಾಟಕದ ಬಿ.ಭಾಸ್ಕರ್‌ ‘ಐ’ ಗುಂಪಿನ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದರು.

ಮೊದಲ ಹೋರಾಟದಲ್ಲಿ 3–0ರಲ್ಲಿ ರಾವಿನ್‌ ಡಿಸೋಜ ಅವರನ್ನು ಮಣಿಸಿದ ಅವರು ನಂತರದ ಪಂದ್ಯದಲ್ಲಿ 3–0 ರಲ್ಲಿ ಆರ್‌.ಜೆ.ಸಾರಿಯಾ ಸವಾಲು ಮೀರಿದರು.

ಇತರ ಪ್ರಮುಖ ಪಂದ್ಯಗಳಲ್ಲಿ ಧ್ರುವ ಸಿತ್ವಾಲ 3–1ರಲ್ಲಿ ಭುವನೇಶ್ವರನ್‌ ವಿರುದ್ಧವೂ, ಸೌರವ್‌ ಕೊಠಾರಿ 3–0ರಲ್ಲಿ ಪ್ರೇಮ್‌ ಎದುರೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry