ರಾಷ್ಟ್ರೀಯ ಫೆನ್ಸಿಂಗ್: ಸಿಮ್ರನ್‌ಜೀತ್‌ಗೆ ಪ್ರಶಸ್ತಿ

7

ರಾಷ್ಟ್ರೀಯ ಫೆನ್ಸಿಂಗ್: ಸಿಮ್ರನ್‌ಜೀತ್‌ಗೆ ಪ್ರಶಸ್ತಿ

Published:
Updated:
ರಾಷ್ಟ್ರೀಯ ಫೆನ್ಸಿಂಗ್: ಸಿಮ್ರನ್‌ಜೀತ್‌ಗೆ ಪ್ರಶಸ್ತಿ

ಬೆಂಗಳೂರು: ಪಂಜಾಬ್‌ ಆಟಗಾರ್ತಿ ಸಿಮ್ರನ್‌ಜೀತ್‌ ಇಲ್ಲಿ ನಡೆಯುತ್ತಿರುವ 25ನೇ ಜೂನಿಯರ್ ರಾಷ್ಟ್ರೀಯ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬುಧ ವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬಾಲಕಿಯರ ಫಾಯಿಲ್ ವಿಭಾಗದ ಫೈನಲ್‌ನಲ್ಲಿ ಸಿಮ್ರನ್‌ಜೀತ್‌ 15–10ರಲ್ಲಿ ರಿಯಾ ಬಕ್ಷಿ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ರಿಯಾ 15–14ರಲ್ಲಿ ಇಚಾ ಮೇಲೂ, ಸಿಮ್ರನ್‌ಜೀತ್‌ 15–7ರಲ್ಲಿ ಕಾಜಲ್ ವಿರುದ್ಧವೂ ಗೆದ್ದಿದ್ದರು.

ಸಿಮ್ರನ್‌ಜೀತ್ ತಮ್ಮ ಚುರುಕು ಆಟದ ಮೂಲಕ ಗಮನಸೆಳೆದರು. ಆರಂಭದಲ್ಲಿಯೇ ಆಕ್ರಮಣಕಾರಿಯಾಗಿ ಆಡಿದ ಅವರು ಕೊನೆಯ ಹಂತದವರೆಗೂ ಛಲಬಿಡದೆ ಹೋರಾಡಿದರು.

ಬಾಲಕಿಯರ ಸಬರೆ ವಿಭಾಗದಲ್ಲಿ ರಾಷ್ಟ್ರೀಯ ಸೇವಾ ದಳ ತಂಡದ ಎಸ್‌.ಸ್ವಾಮಿಯಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದ ಪೈಪೋಟಿಯಲ್ಲಿ ಅವರು 15–8ರಲ್ಲಿ ಪುಷ್ಪಾ ಎದುರು ಗೆದ್ದರು. ಸೆಮಿಫೈನಲ್‌ನಲ್ಲಿ ಪುಷ್ಪಾ 15–12ರಲ್ಲಿ ಸುಬ್‌ಜೋದ್ ವಿರುದ್ಧ ಗೆಲುವು ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry