ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಇದ್ದರಷ್ಟೇ ವಿಮೆ!

ಅಕ್ಷರ ಗಾತ್ರ

‘ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ, ಐಎಸ್‍ಐ ಮಾರ್ಕ್‌ ಇರುವ ಹೆಲ್ಮೆಟ್ ಧರಿಸಿದ್ದರೆ ಮಾತ್ರ ವಾಹನ ಚಾಲಕರು ಅಪಘಾತ ವಿಮೆಗೆ ಅರ್ಹರಾಗುತ್ತಾರೆ’ ಎಂದು ಇತ್ತೀಚೆಗೆ ಹೈಕೋರ್ಟ್ ಏಕಸದಸ್ಯ ಪೀಠವು ಆದೇಶಿಸಿರುವುದು ಸ್ವಾಗತಾರ್ಹ.

ಸೀಟ್ ಬೆಲ್ಟ್ ಹಾಕಿ, ಗುಣಮಟ್ಟದ ಹೆಲ್ಮೆಟ್ ಧರಿಸಿಯೂ ಉಂಟಾಗುವ ಅಪಘಾತಗಳಿಗೆ, ಆಗುವ ಹಾನಿಗಳಿಗೆ ಯಾರು ಹೊಣೆ? ಏಕೆಂದರೆ ನಮ್ಮ ದೇಶದಲ್ಲಿ ವಾಹನ ಸವಾರರ ತಪ್ಪಿನಷ್ಟೇ ರಸ್ತೆನಿರ್ಮಿಸಿದವರ, ನಿರ್ವಹಿಸುವವರ ತಪ್ಪುಗಳೂ ಇರುತ್ತವೆ.

ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆಯ ಮಧ್ಯೆಯೇ ದವಸಧಾನ್ಯಗಳ ಒಕ್ಕಣೆ ಮಾಡುವವರು, ಬಿಡಾಡಿ ಹಂದಿ- ದನಗಳು, ಅಗಣಿತ ಗುಂಡಿಗಳು ಇವುಗಳಿಂದಲೂ ಅಸಂಖ್ಯ ಅಪಘಾತಗಳು ಸಂಭವಿಸುತ್ತವೆ. ಯಾರೋ ಮಾಡಿದ ತಪ್ಪಿಗೆ ವಿಮೆಯೂ ಸಿಗದಿದ್ದರೆ ದುರ್ಮರಣಕ್ಕೀಡಾದವರಿಗೆ, ಗಾಯಗೊಂಡು ನರಳುವವರಿಗೆ ಪರಿಹಾರ ಯಾರು ಕೊಡಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT