ಭದ್ರಾವತಿ: ಸಾವಿನಲ್ಲೂ ಒಂದಾದ ದಂಪತಿ

7

ಭದ್ರಾವತಿ: ಸಾವಿನಲ್ಲೂ ಒಂದಾದ ದಂಪತಿ

Published:
Updated:
ಭದ್ರಾವತಿ: ಸಾವಿನಲ್ಲೂ ಒಂದಾದ ದಂಪತಿ

ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕಿನ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಶುಕ್ರವಾರ ಪತಿಯ ನಿಧನದಿಂದ ಆಘಾತಗೊಂಡು ಅದೇ ದಿನ ಪತ್ನಿಯೂ ಮೃತಪಟ್ಟಿದ್ದಾಳೆ.

ಹನುಮಂತಪ್ಪ (75) ಹಾಗೂ ಸರೋಜಮ್ಮ (52) ಸಾವಿನಲ್ಲೂ ಒಂದಾದ ದಂಪತಿ.

ಕೆಮ್ಮು ಮತ್ತು ಕಫ ಸಮಸ್ಯೆಯಿಂದ ಬಳಲುತ್ತಿದ್ದ ಹನುಮಂತಪ್ಪ ಅವರು ಶುಕ್ರವಾರ ಬೆಳಗಿನಜಾವ 5 ಗಂಟೆಗೆ ನಿಧನರಾದರು. ಪತಿಯ ಸಾವಿನ ದುಃಖದಿಂದ ಸರೋಜಮ್ಮ ಅವರೂ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾವನ್ನಪ್ಪಿದರು.

ದಂಪತಿ ಮೃತಪಟ್ಟ ಸುದ್ದಿ ತಿಳಿದು ಅಕ್ಕ–ಪಕ್ಕದ ಗ್ರಾಮಸ್ಥರು, ಸಂಬಂಧಿಕರು ಮನೆಗೆ ಬಂದು ಅಂತಿಮ ದರ್ಶನ ಪಡೆದರು. ಪತಿ ಹಾಗೂ ಪತ್ನಿಯ ದೇಹವನ್ನು ಅವರ ಜಮೀನಿನಲ್ಲಿ ಅಕ್ಕ ಪಕ್ಕ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಲಾಯಿತು. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry