ಯೂಕಿ: ಮುಖ್ಯ ಸುತ್ತಿಗೆ ಇನ್ನೊಂದೆ ಹೆಜ್ಜೆ ಬಾಕಿ

7

ಯೂಕಿ: ಮುಖ್ಯ ಸುತ್ತಿಗೆ ಇನ್ನೊಂದೆ ಹೆಜ್ಜೆ ಬಾಕಿ

Published:
Updated:
ಯೂಕಿ: ಮುಖ್ಯ ಸುತ್ತಿಗೆ ಇನ್ನೊಂದೆ ಹೆಜ್ಜೆ ಬಾಕಿ

ಮೆಲ್ಬರ್ನ್‌ : ಅಪೂರ್ವ ಆಟದ ಮೂಲಕ ಗಮನಸೆಳೆದ ಭಾರತದ ಯೂಕಿ ಭಾಂಬ್ರಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯೂಕಿ 6–0, 6–2ರಲ್ಲಿ ಸ್ಪೇನ್‌ನ ಕಾರ್ಲೋಸ್‌ ಟೆಬೆರ್ನರ್‌ ಅವರನ್ನು ಮಣಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 183ನೇ ಸ್ಥಾನದಲ್ಲಿರುವ ಸ್ಪೇನ್‌ನ ಆಟಗಾರನಿಗೆ ಯೂಕಿ ಪ್ರಬಲ ಪೈಪೋಟಿ ಒಡ್ಡಿದರು. 57 ನಿಮಿಷದ ಪಂದ್ಯದಲ್ಲಿ ಯೂಕಿ 54 ಪಾಯಿಂಟ್ಸ್‌ಗಳನ್ನು ಪಡೆದರು. ಆರು ಬಾರಿ ಎದುರಾಳಿಯ ಸರ್ವ್ ಮುರಿದರು.

122ನೇ ರ‍್ಯಾಂಕಿಂಗ್ ಸ್ಥಾನದಲ್ಲಿರುವ 25 ವರ್ಷದ ಭಾರತದ ಆಟಗಾರ ಅಂತಿಮ ಅರ್ಹತಾ ಸುತ್ತಿನಲ್ಲಿ ಕೆನಡಾದ ಪೀಟರ್ ಪೊಲಾನ್ಸ್‌ಕಿ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಗೆದ್ದರೆ ಯೂಕಿ ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಆಡಿದ ಭಾರತದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಯೂಕಿ 2015ರಲ್ಲಿ ಮೊದಲ ಸುತ್ತಿನಲ್ಲಿಯೇ ಆ್ಯಂಡಿ ಮರ್ರೆ ಎದುರು ಸೋತಿದ್ದರು. 2016ರಲ್ಲಿ ಕೂಡ ಮೊದಲ ಸುತ್ತಿನಲ್ಲಿ ಥಾಮಸ್‌ ಬೆರ್ಡಿಕ್‌ ಎದುರು ಪರಾಭವಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry