ಶ್ರೀಗಂಧ ಕದ್ದವರಿಗೆ 5 ವರ್ಷ ಜೈಲು ಶಿಕ್ಷೆ

7

ಶ್ರೀಗಂಧ ಕದ್ದವರಿಗೆ 5 ವರ್ಷ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಶ್ರೀಗಂಧ ಮರಗಳನ್ನು ಕದ್ದು ಅಕ್ರಮವಾಗಿ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದ ಇಬ್ಬರಿಗೆ 60ನೇ ಸಿಟಿ ಸಿವಿಲ್‌ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದೆ.

ಹಾಸನ ಜಿಲ್ಲೆಯ ಮಾಡಹಾಳು ಗ್ರಾಮದ ಗೌಸ್‌ಪೀರ್ (44) ಹಾಗೂ ತುಮಕೂರಿನ ಕೆಂಪನಹಳ್ಳಿಯ ರಂಗನಾಥ್ (33) ಶಿಕ್ಷೆಗೆ ಒಳಗಾದವರು.

ವಿದ್ಯಾರ್ಥಿನಿ ಆತ್ಮಹತ್ಯೆ: ‘ಅಡುಗೆ ಮಾಡುವುದನ್ನು ಕಲಿತಿಲ್ಲ’ ಎಂದು ತಾಯಿ ಬೈದಿದ್ದಕ್ಕೆ ಪಿಯುಸಿ ವಿದ್ಯಾರ್ಥಿನಿ ವರಲಕ್ಷ್ಮಿ (17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯಲಹಂಕ ಉಪನಗರ ಸಮೀಪದ ಕನಕನಗರ ನಿವಾಸಿಯಾದ ವರಲಕ್ಷ್ಮಿ, ಶುಕ್ರವಾರ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ. ಕೂಲಿ ಕೆಲಸಕ್ಕೆ ಹೋಗಿದ್ದ ತಾಯಿ ಗಂಗಮ್ಮ, ಸಂಜೆ 4.30ರ ಸುಮಾರಿಗೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry