ಮಗು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

7

ಮಗು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

Published:
Updated:

ಬೆಂಗಳೂರು: ಸುಬ್ರಹ್ಮಣ್ಯಪುರದ ಪೂರ್ವಪ್ರಜ್ಞಾ ಲೇಔಟ್‌ನಲ್ಲಿ ಮಗುವನ್ನು ಕೊಂದ ತಾಯಿ ಬಳಿಕ ನೇಣು ಹಾಕಿಕೊಂಡು ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೂವರೆ ವರ್ಷದ ಅಗಸ್ತ್ಯ ಹಾಗೂ ಬಿ.ವಿ.ಪೃತಾ(28) ಮೃತರು. ಕನಕಪುರದ ಸಾತನೂರಿನವರಾದ ಪೃತಾ ಎರಡೂವರೆ ವರ್ಷಗಳ ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್ ಅನಿಲ್ ಎಂಬುವರನ್ನು ಮದುವೆಯಾಗಿದ್ದರು.

ಶುಕ್ರವಾರ ಸಂಜೆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ ಅವರು ಬಳಿಕ ನೇಣಿಗೆ ಶರಣಾಗಿದ್ದಾರೆ. ಪತಿಯ ಸಂಬಂಧಿಕರು ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ಘಟನೆಯ ಕಾರಣ ತಿಳಿದು ಬಂದಿಲ್ಲ. ದೂರು ಕೊಡಲು ಬಂದಿದ್ದ ಅವರ ತಾಯಿ ಎದೆನೋವು ಕಾರಣ ನೀಡಿ ವಾಪಾಸ್ ಹೋಗಿದ್ದಾರೆ ಎಂದು ಸುಬ್ರಹ್ಮಣ್ಯಪುರ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry