ಮಂಗಳೂರು: ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆ

7

ಮಂಗಳೂರು: ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆ

Published:
Updated:
ಮಂಗಳೂರು: ರೌಡಿ ಟಾರ್ಗೆಟ್ ಇಲ್ಯಾಸ್ ಕೊಲೆ

ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಕುಖ್ಯಾತ ರೌಡಿ ಇಲ್ಯಾಸ್‌ನನ್ನು ಶನಿವಾರ ಬೆಳಿಗ್ಗೆ 9ರ ಸುಮಾರಿಗೆ ಜೆಪ್ಪು ಕುಡ್ಪಾಡಿಯಲ್ಲಿ ಇಬ್ಬರು ದುಷ್ಕರ್ಮಿಗಳು ಆತನ ಎದೆಗೆ ಚಾಕುವಿನಿಂದ ಇರಿದು ಕೊಲೆ‌ ಮಾಡಿದ್ದಾರೆ.

ಜೈಲಿನಿಂದ ಜಾಮೀನಿನ ಮೇಲೆ ‌ಬಿಡುಗಡೆಯಾಗಿ ಎರಡು ದಿನವಾಗಿತ್ತು.

ಮೃತದೇಹವನ್ನು ಫ್ಲ್ಯಾಟ್‌ನಿಂದ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಡಿಸಿಪಿ‌ ಹನುಮಂತರಾಯ ತಿಳಿಸಿದ್ದಾರೆ.

ವಿರೋಧಿ ಗುಂಪಿನ ರೌಡಿಗಳು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈತ ಉಳ್ಳಾಲದಲ್ಲಿ ಕೊಲೆ, ಅತ್ಯಾಚಾರ, ಅಪಹರಣದಂತಹ ಕೃತ್ಯ ಎಸಗುತ್ತಿದ್ದ ಗುಂಪಿನ ನಾಯಕನಾಗಿದ್ದ. ಉಳ್ಳಾಲ‌ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೂಡ ಆಗಿದ್ದ.

ಸಚಿವ ಯು.ಟಿ.ಖಾದರ್ ಮತ್ತು ಶಾಸಕ‌ ಬಿ.ಎ.ಮೊಯಿದ್ದೀನ್ ಅವರ ಜೊತೆ ಈತ ಇದ್ದ ಚಿತ್ರಗಳು ಭಾರಿ ಸದ್ದು ಮಾಡಿದ್ದವು.

ರೌಡಿ ಇಲ್ಯಾಸ್‌.

ಇದನ್ನೂ ಓದಿ...ದೀಪಕ್‌ ಕೊಲೆ ಪ್ರಕರಣ: ಟಾರ್ಗೆಟ್‌ ಗುಂಪಿನ ಸದಸ್ಯನೊಂದಿಗೆ ಖಾದರ್ ನಂಟು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry