‘ಸಿದ್ದರಾಮಯ್ಯ ಅವರಿಂದ ಪ್ರಾಮಾಣಿಕ ಪ್ರಯತ್ನ ಅಗತ್ಯ’

7

‘ಸಿದ್ದರಾಮಯ್ಯ ಅವರಿಂದ ಪ್ರಾಮಾಣಿಕ ಪ್ರಯತ್ನ ಅಗತ್ಯ’

Published:
Updated:

ನರಗುಂದ: ‘ಮಹದಾಯಿ ವಿಷಯದಲ್ಲಿ ಗೋವಾದ ಮುಖ್ಯಮಂತ್ರಿ ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿರಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 913ನೇ ದಿನ ಶುಕ್ರವಾರ ಅವರು ಮಾತನಾಡಿದರು.

‘ಮಹದಾಯಿ ಹೋರಾಟ ನಿರಂತರ. ಗೋವಾ, ಕರ್ನಾಟಕದ ಮುಖ್ಯಮಂತ್ರಿಗಳು ರಾಜಕೀಯ ಹಿತಾಸಕ್ತಿ ಬದಿಗಿರಿಸಿ, ರೈತ ಪರ ಕಾಳಜಿ ವಹಿಸಬೇಕು. ಸಮಸ್ಯೆ ಇತ್ಯರ್ಥಪಡಿಸಲು ಸಾಧ್ಯವಾಗದಿದ್ದರೆ ರೈತರ ಹೋರಾಟವನ್ನು ಎದುರಿಸಲು ಸಿದ್ಧರಾಗಬೇಕು’ ಎಂದರು.

‘ಗೋವಾದ ಮುಖ್ಯಮಂತ್ರಿಗಳು ಮತ್ತೆ ಹೇಳಿಕೆ ಬದಲಿಸಿದ್ದಾರೆ. ನ್ಯಾಯ ಮಂಡಳಿಯೇ ಅಂತಿಮ ಎಂದಿದ್ದಾರೆ. ಇದು ಸಲ್ಲದು. ಇನ್ನೊಂದೆಡೆ ಗೋವಾ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದೆ. ಇಂತಹ ಧೋರಣೆ ನಿಲ್ಲಬೇಕು’ಎಂದು ಅವರು ಆಗ್ರಹಿಸಿದರು.

ಹನಮಂತ ಪಡೆಸೂರು ಮಾತನಾಡಿದರು. ‘ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಉತ್ತರ ಕರ್ನಾಟಕವಂತೂ ಕರ್ನಾಟಕದಲ್ಲಿ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಇದು ಸಲ್ಲದು. ಮಹದಾಯಿ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೂರ್ಣ

ವಿಫಲವಾಗಿವೆ’ ಎಂದರು.

‘ದಕ್ಷಿಣ ಕನ್ನಡದ ಜನಪ್ರತಿನಿಧಿಗಳು ನೀರಿನ ವಿಷಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಆ ಧೈರ್ಯ, ಧೋರಣೆ ನಮ್ಮ ಭಾಗದ ರಾಜಕಾರಣಿಗಳಿಗೆ ಇಲ್ಲ’ ಎಂದು ಕಿಡಿ ಕಾರಿದರು. ‘ಮಹದಾಯಿ ಈ ಭಾಗದ ರೈತರ ಬದುಕಿನ ಅವಿಭಾಜ್ಯ ಅಂಗ. ಇದರ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಮಲಪ್ರಭಾ ಒಡಲು ತುಂಬಿಸಬೇಕು’ ಎಂದು ಆಗ್ರಹಿಸಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ಟರ, ಎಸ್.ಬಿ.ಜೋಗಣ್ಣವರ, ಅಣ್ಣಪ್ಪಗೌಡ ಪಾಟೀಲ, ಸುಭಾಸ ಗಿರಿಯಣ್ಣವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry