ಡೊನಾಲ್ಡ್ ಟ್ರಂಪ್ ಆರೋಗ್ಯ ಬಹಳ ಚೆನ್ನಾಗಿದೆ ಎಂದ ವೈದ್ಯರು

7

ಡೊನಾಲ್ಡ್ ಟ್ರಂಪ್ ಆರೋಗ್ಯ ಬಹಳ ಚೆನ್ನಾಗಿದೆ ಎಂದ ವೈದ್ಯರು

Published:
Updated:
ಡೊನಾಲ್ಡ್ ಟ್ರಂಪ್ ಆರೋಗ್ಯ ಬಹಳ ಚೆನ್ನಾಗಿದೆ ಎಂದ ವೈದ್ಯರು

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಬಹಳ ಚೆನ್ನಾಗಿದೆ ಎಂದು ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದ ವೈದ್ಯ ರೊನ್ನೀ ಜಾಕ್ಸನ್ ಅವರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಹುದ್ದೆಗೆ ಏರಿದ ನಂತರ ಇದೇ ಮೊದಲ ಬಾರಿ ಟ್ರಂಪ್ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ವೈದ್ಯಕೀಯ ಕೇಂದ್ರದಲ್ಲಿ ಗಂಟೆಗಳ ಕಾಲ ನಡೆದ ಆರೋಗ್ಯ ತಪಾಸಣೆಯಲ್ಲಿ ಟ್ರಂಪ್ ಅವರ ರಕ್ತದೊತ್ತಡ, ಕೊಬ್ಬಿನಂಶ, ಹೃದಯ ಬಡಿತ, ತೂಕ ಮತ್ತು ಮಧುಮೇಹ ಪ್ರಮಾಣವನ್ನು ಪರೀಕ್ಷಿಸಲಾಗಿದೆ.

‘ನನ್ನ ಪ್ರಕಾರ ತಪಾಸಣೆ ವರದಿ ಸಹಜವಾಗಿಯೇ ಇರಲಿದೆ. ಒಂದೊಮ್ಮೆ ಹಾಗಿಲ್ಲವಾದರೆ ನನಗೇ ಅಚ್ಚರಿಯಾಗುತ್ತದೆ’ ಎಂದು ಟ್ರಂಪ್ ಅವರೇ ತಮ್ಮ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದರು. ‘ನನ್ನ ಆರೋಗ್ಯ ಕೆಟ್ಟಿದೆ ಎಂಬ ವರದಿ ಬಂದರೆ ಷೇರು ಮಾರುಕಟ್ಟೆಗೆ ಬೇಸರವಾಗುತ್ತದೆ’ ಎಂದು ಹಾಸ್ಯ ಮಾಡಿದ್ದರು.

ಅಮೆರಿಕದ ಅಧ್ಯಕ್ಷರ ಆರೋಗ್ಯ ತಪಾಸಣೆ ಮಾಡುವುದು ಹೊಸದೇನಲ್ಲ. ಆದರೆ ವಿರೋಧಿಗಳು ಟ್ರಂಪ್ ಅವರ ಆರೋಗ್ಯದ ಬಗ್ಗೆ ಟೀಕಿಸಿದ್ದರಿಂದ ಅವರ ತಪಾಸಣೆ ಹೆಚ್ಚು ಚರ್ಚೆಗೆ ಕಾರಣವಾಗಿತ್ತು.

ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಚರ್ಚೆಯಾಗಿತ್ತು. ಟ್ರಂಪ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.

ಇದನ್ನೂ ಓದಿ...

ನಾನು ಸ್ಥಿರ ಮನಸಿನ ಪ್ರತಿಭಾಶಾಲಿ, ಬುದ್ಧಿವಂತ: ಟ್ರಂಪ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry