ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ

7
ಶಿವರಾಜ್‌ಕುಮಾರ್ ಉದ್ಘಾಟನೆ; ಹರಿದುಬಂದ ಜನಸಾಗರ

ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ

Published:
Updated:
ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಆರು ದಿನ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಶನಿವಾರ ಅದ್ದೂರಿ ಚಾಲನೆ ದೊರೆಯಿತು.

ಕಪಿಲಾ ನದಿ ತಟದಲ್ಲಿರುವ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿರುವ ಜಾತ್ರೆಯ ಮೊದಲ ದಿನದ ಸೊಬಗನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಬಂದಿದ್ದರು.

ನಟ ಶಿವರಾಜ್‌ಕುಮಾರ್ ಶನಿವಾರ ಬೆಳಿಗ್ಗೆ ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಜಾತ್ರೆಗೆ ಚಾಲನೆ ನೀಡಿದರು. ತಮ್ಮ ‘ಮಫ್ತಿ’ ಚಿತ್ರದ ಡೈಲಾಗ್‌ ಹಾಗೂ ‘ಟಗರು’ ಚಿತ್ರದ ಹಾಡಿಗೆ ಹೆಜ್ಜೆಹಾಕಿ ಅಭಿಮಾನಿಗಳನ್ನು ರಂಜಿಸಿದರು.

ಸಾಂಸ್ಕೃತಿಕ ಮೇಳ:

ಜಾತ್ರಾ ಮಹೋತ್ಸವ ಜ.18ರವರೆಗೆ ನಡೆಯಲಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ಸಾಮೂಹಿಕ ವಿವಾಹ ನಡೆಯಲಿದ್ದು, 150ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿವೆ.

ಸೋಮವಾರ ಮಹಾರಥೋತ್ಸವ ನಡೆಯಲಿದ್ದು, ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಗಮನ ಸೆಳೆಯುತ್ತಿರುವ ನೂತನ ರಥವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಕೃಷಿ ಮೇಳದಲ್ಲಿ ‘ಕೃಷಿ ಬ್ರಹ್ಮಾಂಡ’ವನ್ನೇ ಅಭಿವೃದ್ಧಿಪಡಿಸಲಾಗಿದೆ. ಒಂದು ಎಕರೆಯಲ್ಲಿ 152 ವಿವಿಧ ರೀತಿಯ ಬೆಳೆ ಬೆಳೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry