ಐವರು ಕುಸ್ತಿಪಟುಗಳು ಸೇರಿ 6 ಮಂದಿ ಸಾವು

7
ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ:

ಐವರು ಕುಸ್ತಿಪಟುಗಳು ಸೇರಿ 6 ಮಂದಿ ಸಾವು

Published:
Updated:
ಐವರು ಕುಸ್ತಿಪಟುಗಳು ಸೇರಿ 6 ಮಂದಿ ಸಾವು

ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಐವರು ಕುಸ್ತಿಪಟುಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

‘ಮೃತರು, ಔಂದ್‌ ಗ್ರಾಮದಲ್ಲಿ ನಡೆದ ಸ್ಥಳೀಯ ಮಟ್ಟದ ಕುಸ್ತಿಸ್ಪರ್ಧೆಯಲ್ಲಿ ಭಾಗವಹಿಸಿ ಸಾಂಗ್ಲಿಯ ಕುಂದಲ್‌ನತ್ತ ಟೆಂಪೊ ಟ್ರಾಕ್ಸ್‌ ಕ್ರೂಜರ್‌ನಲ್ಲಿ ಮರಳುತ್ತಿದ್ದರು. ವಂಗಿ ಗ್ರಾಮದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಇದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಏಳು ಮಂದಿ ಮಂದಿ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಬಳಿಕ ಟ್ರ್ಯಾಕ್ಟರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry