ಎಚ್‌ಪಿಎಲ್‌: ವಾರಿಯರ್ಸ್‌ ಜಯಭೇರಿ

7

ಎಚ್‌ಪಿಎಲ್‌: ವಾರಿಯರ್ಸ್‌ ಜಯಭೇರಿ

Published:
Updated:
ಎಚ್‌ಪಿಎಲ್‌: ವಾರಿಯರ್ಸ್‌ ಜಯಭೇರಿ

ಹುಬ್ಬಳ್ಳಿ: ಹುಬ್ಬಳ್ಳಿ ನೈಟ್ಸ್‌ ತಂಡ ನೀಡಿದ್ದ 158 ರನ್‌ ಗುರಿಯನ್ನು ಐದು ಎಸೆತಗಳು ಬಾಕಿ ಇರುವಂತೆ ಮುಟ್ಟಿದ ಎನ್‌.ಕೆ. ವಾರಿಯರ್ಸ್‌ ತಂಡ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಜಯ ಪಡೆಯಿತು.

ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೈಟ್ಸ್ ತಂಡ 20 ಓವರ್‌ಗಳಲ್ಲಿ 157 ರನ್‌ ಕಲೆ ಹಾಕಿತ್ತು. ವಾರಿಯರ್ಸ್‌ ಏಳು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಇನ್ನೊಂದು ಪಂದ್ಯದಲ್ಲಿ ಧಾರವಾಡದ ಸ್ವರ್ಣ ಸ್ಟ್ರೈಕರ್ಸ್‌ ಎದುರು ಹುಬ್ಬಳ್ಳಿಯ ಸ್ಟೈಟೌನ್‌ ಬ್ಯಾಷರ್ಸ್‌ 27 ರನ್‌ ಜಯ ಸಾಧಿಸಿತು. ಸ್ಟೈಟೌನ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 149 ರನ್ ಗಳಿಸಿತ್ತು. ಸ್ಟ್ರೈಕರ್ಸ್‌ 18.5 ಓವರ್‌ಗಳಲ್ಲಿ 122 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್‌ ಎದುರು ಹುಬ್ಬಳ್ಳಿ ಟೈಗರ್ಸ್ ತಂಡ 44 ರನ್‌ಗಳ ಜಯ ಸಾಧಿಸಿತು. ಹುಬ್ಬಳ್ಳಿ ತಂಡ ಮೊದಲು ಬ್ಯಾಟ್‌ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿತ್ತು. ನಿತಿನ್‌ ಭಿಲ್ಲೆ 47 ಎಸೆತಗಳಲ್ಲಿ ಔಟಾಗದೆ 70 ರನ್‌ ಗಳಿಸಿದರು. ಟಿ.ಎಸ್‌.ಎಸ್‌. ತಂಡ 19 ಓವರ್‌ಗಳಲ್ಲಿ 133 ರನ್ ಗಳಿಸಿ ಆಲೌಟ್‌ ಆಯಿತು. ಎಚ್‌ಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry