ಬಸ್‌ ಮಗುಚಿ 7 ಮಂದಿ ದುರ್ಮರಣ

7
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅವಘಡ

ಬಸ್‌ ಮಗುಚಿ 7 ಮಂದಿ ದುರ್ಮರಣ

Published:
Updated:
ಬಸ್‌ ಮಗುಚಿ 7 ಮಂದಿ ದುರ್ಮರಣ

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಮುಂಜಾನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಪಲ್ಟಿಯಾಗಿ ಚಾಲಕ ಮತ್ತು ನಿರ್ವಾಹಕ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.

ಬೆಳಗಿನ ಜಾವ 3.30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ರಸ್ತೆ ಬದಿಯ 20 ಅಡಿ ಆಳಕ್ಕೆ ಬಿದ್ದಿದ್ದು, 38 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಹಾಸನ ಜಿಲ್ಲಾಸ್ಪತ್ರೆ ಹಾಗೂ ಎನ್‌ಡಿಆರ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಅತಿ ವೇಗದ ಚಾಲನೆ ಅಥವಾ ನಿದ್ದೆ ಮಂಪರಿನಲ್ಲಿ ದುರಂತ ಸಂಭವಿಸಿರಬಹುದು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು. ಬೆಳ್ತಂಗಡಿಯ ಬಿಜೋ ಜಾರ್ಜ್ (26), ಡಯಾನಾ (20), ಸೋನಿಯಾ (28), ಧರ್ಮಸ್ಥಳದ ರಾಕೇಶ್ ಪ್ರಭು (26), ಬೆಂಗಳೂರಿನ ಬಾಪೂಜಿ ನಗರದ ಗಂಗಾಧರ್ (50), ಬಸ್ ಚಾಲಕ ಬಸವನಬಾಗೇವಾಡಿಯ ಶಿವಪ್ಪ ಛಲವಾದಿ (42) ಮತ್ತು ನಿರ್ವಾಹಕ ರಾಯಚೂರಿನ ಲಕ್ಷ್ಮಣ್ ಮೃತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry