ವಿಶ್ವಸಂಸ್ಥೆ ರಾಯಭಾರಿ ಟ್ವಿಟರ್ ಖಾತೆ ಹ್ಯಾಕ್!

7

ವಿಶ್ವಸಂಸ್ಥೆ ರಾಯಭಾರಿ ಟ್ವಿಟರ್ ಖಾತೆ ಹ್ಯಾಕ್!

Published:
Updated:
ವಿಶ್ವಸಂಸ್ಥೆ ರಾಯಭಾರಿ ಟ್ವಿಟರ್ ಖಾತೆ ಹ್ಯಾಕ್!

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆ ಭಾನುವಾರ ಹ್ಯಾಕ್ ಆಗಿದೆ.

@AkbaruddinIndia ಎಂದಿದ್ದ ಟ್ವಿಟರ್ ಖಾತೆಯ ಹೆಸರನ್ನು @AkbaruddinSyed ಎಂದು ಬದಲಿಸಲಾಗಿದೆ. ಪಾಕಿಸ್ತಾನದ ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಅವರ ಚಿತ್ರ ಹಾಗೂ ಟರ್ಕಿ, ಪಾಕಿಸ್ತಾನದ ಬಾವುಟಗಳಿರುವ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ. ರಾಜ್ ಕಪೂರ್ ಅಭಿನಯದ ‘ಆವಾರಾ’ ಹಿಂದಿ ಸಿನಿಮಾದ ‘ಆವಾರಾ ಹೂಂ’ ಹಾಡಿನ ವಿಡಿಯೊ ಕೂಡ ಅಪ್‌ಲೋಡ್ ಆಗಿದೆ.

ಹ್ಯಾಕ್ ಮಾಡಿರುವುದು ವಿದೇಶಿ ವ್ಯಕ್ತಿ ಎಂದು ಶಂಕಿಸಲಾಗಿದೆ. ಆದರೆ ವ್ಯಕ್ತಿಯ ಪತ್ತೆ ಸಾಧ್ಯವಾಗಿಲ್ಲ. ಅಕ್ಬರುದ್ದೀನ್ ಅವರು ತಾತ್ಕಾಲಿಕವಾಗಿ ಖಾತೆಯನ್ನು ನಿರ್ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry