ಅಂಕಾರ: ಹಾದಿ ತಪ್ಪಿದ ವಿಮಾನ

7
162 ಪ್ರಯಾಣಿಕರು, ಸಿಬ್ಬಂದಿ ಪಾರು

ಅಂಕಾರ: ಹಾದಿ ತಪ್ಪಿದ ವಿಮಾನ

Published:
Updated:
ಅಂಕಾರ: ಹಾದಿ ತಪ್ಪಿದ ವಿಮಾನ

ಅಂಕಾರ: ಟರ್ಕಿಯ ಉತ್ತರ ಭಾಗದಲ್ಲಿ ವಿಮಾನವೊಂದು ಭೂಸ್ಪರ್ಶ ಮಾಡಿದ ನಂತರ ನಿಯಂತ್ರಣ ತಪ್ಪಿ, ರನ್‌ವೇಯಿಂದ ಜಾರಿ‌ ಕೆಲವು ಅಡಿಗಳಷ್ಟು ತಗ್ಗು ಪ್ರದೇಶಕ್ಕೆ ಇಳಿದಿದೆ. ಅಲ್ಲಿ ಅದರ ಚಕ್ರಗಳು ಮಣ್ಣಿನಡಿ ಹೂತುಹೋಗಿದ್ದರಿಂದ, ಕೆಳಗಿದ್ದ ಸಮುದ್ರಕ್ಕೆ ವಿಮಾನ ಬೀಳುವುದು ತಪ್ಪಿದೆ. ಇದರಿಂದ ಭಾರಿ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ರನ್‌ವೇಯಿಂದ ವಿಮಾನ ಸಮುದ್ರದತ್ತ ಜಾರಿದ ಚಿತ್ರವನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಪೆಗಸಸ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ರಾಜಧಾನಿ ಅಂಕಾರದಿಂದ ಹೊರಟು ಟ್ರ್ಯಾಬ್‌ಜಾನ್‌ ನಿಲ್ದಾಣದಲ್ಲಿ ಇಳಿದಿತ್ತು.

162 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ನಾಲ್ವರು ಸಿಬ್ಬಂದಿ ಅದರಲ್ಲಿ ಇದ್ದರು. ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ.

‘ಎಲ್ಲರನ್ನೂ ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಟ್ರ್ಯಾಬ್‌ಜನ್‌ ಗವರ್ನರ್‌ ಕಚೇರಿ ತಿಳಿಸಿದೆ.

‘ವಿಮಾನದ ಮುಂಭಾಗ ಕೆಳಮುಖವಾಗಿ ಹಿಂಭಾಗವು ಮೇಲೆದ್ದಿತು. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಕೂಗಾಡಲು, ಚೀರಾಡಲು ಆರಂಭಿಸಿದರು’ ಎಂದು ಪ್ರಯಾಣಿಕರಲ್ಲಿ ಒಬ್ಬರಾದ ಫತ್ಮಾ ಗೊರ್ಡು ಎಂಬುವವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry