ಎರಡನೇ ಅತಿವೇಗದ ಶತಕ ಸಿಡಿಸಿದ ಪಂತ್‌

6

ಎರಡನೇ ಅತಿವೇಗದ ಶತಕ ಸಿಡಿಸಿದ ಪಂತ್‌

Published:
Updated:

ನವದೆಹಲಿ: ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿ ರಿಷಭ್‌ ಪಂತ್ ಇಲ್ಲಿ ಮಿಂಚು ಹರಿಸಿದರು. ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅವರು 32 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಇದರ ಪರಿಣಾಮ ದೆಹಲಿ ತಂಡ 10 ವಿಕೆಟ್‌ಗಳಿಂದ ಗೆದ್ದಿತು.

ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ ಅವರ ಹೆಸರಿನಲ್ಲಿದೆ. ಅವರು 2013ರ ಐಪಿಎಲ್‌ನಲ್ಲಿ 30 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಪಂತ್‌ ಎರಡು ಎಸೆತಗಳ ಅಂತರದಲ್ಲಿ ಈ ಸಾಧನೆ ಸಮಗಟ್ಟುವ ಅವಕಾಶ ಕಳೆದುಕೊಂಡರು. ಒಟ್ಟು 38 ಎಸೆತಗಳಲ್ಲಿ 116 ರನ್‌ ಗಳಿಸಿದ ಪಂತ್‌ 12 ಸಿಕ್ಸರ್‌ ಮತ್ತು ಎಂಟು ಬೌಂಡರಿಗಳನ್ನು ಸಿಡಿಸಿದ್ದರು. 2016ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 48 ಎಸೆತಗಳಲ್ಲಿ ಶತಕಗಳಿಸಿ ಅವರು ದಾಖಲೆ ಬರೆದಿದ್ದರು.

ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಅವರು ತಂಡವನ್ನು ಫೈನಲ್‌ ವರೆಗೆ ತಲುಪಿಸಿದ್ದರು. ಐಪಿಎಲ್‌ನಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಪರವಾಗಿ ಕ್ರಮವಾಗಿ 38, 9 ಮತ್ತು 51 ರನ್‌ಗಳಿಸಿದ್ದರು. ಈ ಬಾರಿ ಅವರನ್ನು ಡೇರ್‌ಡೆವಿಲ್ಸ್ ತಂಡದಲ್ಲಿ ಉಳಿಸಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಹಿಮಾಚಲ ಪ್ರದೇಶ: 20 ಓವರ್‌ಗಳಲ್ಲಿ 8ಕ್ಕೆ 144 (ಪಿ.ಎಸ್.ಚೋಪ್ರಾ 30, ಎನ್‌.ಆರ್‌.ಗಾಂಗ್ಟ 40, ಆರ್‌.ಆರ್.ಧನವ್‌ 23; ಪ್ರದೀಪ್‌ ಸಾಂಗ್ವಾನ್‌ 39ಕ್ಕೆ2); ದೆಹಲಿ: 11.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 148 (ಗೌತಮ್‌ ಗಂಭೀರ್‌ 30, ಋಷಭ್‌ ಪಂತ್‌ 116). ಫಲಿತಾಂಶ: ದೆಹಲಿಗೆ 10 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry