ಜೇಸನ್ ದಾಖಲೆಯ ಶತಕ: ಇಂಗ್ಲೆಂಡ್ ಶುಭಾರಂಭ

7
ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯ; ಇಂಗ್ಲೆಂಡ್ ಶುಭಾರಂಭ

ಜೇಸನ್ ದಾಖಲೆಯ ಶತಕ: ಇಂಗ್ಲೆಂಡ್ ಶುಭಾರಂಭ

Published:
Updated:
ಜೇಸನ್ ದಾಖಲೆಯ ಶತಕ: ಇಂಗ್ಲೆಂಡ್ ಶುಭಾರಂಭ

ಮೆಲ್ಬರ್ನ್‌: ಜೇಸನ್‌ ರಾಯ್‌ (180) ಅವರ ದಾಖಲೆಯ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜಯದ ನಗೆ ಬೀರಿದೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡದ ಆಟಗಾರ ದಾಖಲಿಸಿದ ಅಧಿಕ ಸ್ಕೋರ್ ಇದಾಗಿದೆ. ಆ್ಯಷಸ್ ಟೆಸ್ಟ್ ಸರಣಿಯ ಸೋಲಿನಿಂದ ಹೊರಬಂದಿರುವ ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಪಡೆದು ಶುಭಾರಂಭ ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 308ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಎಯೊನ್ ಮಾರ್ಗನ್‌ ಪಡೆ 48.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಸೇರಿತು.

ಜಾಸನ್ ದಾಖಲೆಯ ಶತಕ: ಸವಾಲಿನ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜೇಸನ್‌ ರಾಯ್‌ (180, 151ಎ, 16ಬೌಂ, 5ಸಿ) ಹಾಗೂ ಜೋ ರೂಟ್‌ (ಅಜೇಯ 91, 110ಎ, 5ಬೌಂ) ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್ ಜೊತೆಯಾಟಕ್ಕೆ 221 ರನ್ ಪೇರಿಸಿತು.

ರೂಟ್ ಔಟಾಗದೆ ತಂಡವನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಏಳು ಎಸೆತಗಳು ಬಾಕಿ ಇರುವಂತೆಯೇ ಇಂಗ್ಲೆಂಡ್ ಗೆಲುವಿನ ಕದ ತಟ್ಟಿತು.

ಮೆಲ್ಬರ್ನ್‌ ಅಂಗಳದಲ್ಲಿ ಅತಿಹೆಚ್ಚು ರನ್‌ ಬೆನ್ನಟ್ಟಿದ ದಾಖಲೆಯನ್ನು ಕೂಡ ಇಂಗ್ಲೆಂಡ್ ತಂಡ ಮುರಿದಿದೆ. 2011ರಲ್ಲಿ ಇಂಗ್ಲೆಂಡ್ ದಾಖಲಿಸಿದ್ದ 297ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಬೆನ್ನಟ್ಟಿತ್ತು.

ಟಾಸ್ ಸೋತರೂ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದುಕೊಂಡಿತು. ಆ್ಯರನ್ ಫಿಂಚ್‌ (107, 119ಎ, 10ಬೌಂ, 3ಸಿ) ಶತಕ ದಾಖಲಿಸಿ ಉತ್ತಮ ಆರಂಭ ನೀಡಿದರು.

ಮಿಚೆಲ್‌ ಮಾರ್ಷ್‌ (50, 68ಎ, 2 ಬೌಂ, 2ಸಿ), ಮಾರ್ಕಸ್ ಸ್ಟೋನಿಸ್‌ (60, 40ಎ, 5ಬೌಂ, 2ಸಿ) ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರು

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 304 (ಆ್ಯರನ್‌ ಫಿಂಚ್‌ 107, ಮಿಚೆಲ್‌ ಮಾರ್ಷ್‌ 50, ಮಾರ್ಕಸ್‌ ಸ್ಟೋನಿಸ್‌ 60; ಲಿಯಾಮ್ ಪ್ಲುಂಕೆಟ್‌ 71ಕ್ಕೆ3).

ಇಂಗ್ಲೆಂಡ್‌: 48.5 ಓವರ್‌ಗಳಲ್ಲಿ 308 (ಜೋಸನ್‌ ರಾಯ್‌ 180, ಜೋ ರೂಟ್ ಅಜೇಯ 91; ಮಿಚೆಲ್ ಸ್ಟಾರ್ಕ್‌ 71ಕ್ಕೆ2).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಜಯಭೇರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry