ಡ್ರಾ ಪಂದ್ಯದಲ್ಲಿ ಆನಂದ್‌

7

ಡ್ರಾ ಪಂದ್ಯದಲ್ಲಿ ಆನಂದ್‌

Published:
Updated:
ಡ್ರಾ ಪಂದ್ಯದಲ್ಲಿ ಆನಂದ್‌

ವಿಜ್ಕ್‌ ಆ್ಯನ್‌ ಜೀ, ನೆದರ್ಲೆಂಡ್ಸ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್ ಆನಂದ್‌, 80ನೇ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಸೋಮವಾರ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಆನಂದ್‌, ರಷ್ಯಾದ ಸರ್ಜಿ ಕರ್ಜಾಕಿನ್‌ ವಿರುದ್ಧ ಪಾಯಿಂಟ್‌ ಹಂಚಿಕೊಂಡರು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 1.5ಕ್ಕೆ ಹೆಚ್ಚಿಸಿಕೊಂಡಿರುವ ಭಾರ ತದ ಆಟಗಾರ, ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಗಳಿಸಿದ್ದಾರೆ.

ನೆದರ್ಲೆಂಡ್ಸ್‌ನ ಅನಿಶ್‌ ಗಿರಿ, ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಅನಿಶ್‌, ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌ ಸವಾಲು ಮೀರಿದರು. ಇದರೊಂದಿಗೆ ಪೂರ್ಣ ಪಾಯಿಂಟ್‌ ಹೆಕ್ಕಿದ ಅವರು ಒಟ್ಟು ಪಾಯಿಂಟ್ಸ್‌ ಅನ್ನು 2ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಕಾರ್ಲ್‌ಸನ್‌ಗೆ ಜಯ: ನಾರ್ವೆಯ ವಿಶ್ವ ಚಾಂಪಿಯನ್‌ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಎರಡನೇ ಸುತ್ತಿನಲ್ಲಿ ಗೆಲುವಿನ ಸಿಹಿ ಸವಿದರು.

ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಕಾರ್ಲ್‌ಸನ್‌, ಭಾರತದ ಬಿ.ಅಧಿಬಾನ್‌ ಅವರನ್ನು ಸೋಲಿಸಿದರು.

ಭಾರತದ ವಿದಿತ್‌ ಸಂತೋಷ್‌ ಗುಜರಾತಿ, ಪೋಲೆಂಡ್‌ನ ಮೈಕಲ್‌ ಕ್ರಾಸೆನ್‌ಕೊವ್‌ ಎದುರೂ, ನೆದರ್ಲೆಂಡ್ಸ್‌ನ ಲುಕಾಸ್‌ ವ್ಯಾನ್‌ ಫೊರೀಸ್ಟ್‌, ನಾರ್ವೆಯ ಆರ್ಯನ್‌ ತಾರಿ ವಿರುದ್ಧವೂ, ರಷ್ಯಾದ ಓಲ್ಗಾ ಗಿರ‍್ಯಾ, ಮಥಿಯಾಸ್‌ ಬ್ಲೂಬಾವುಮ್‌ ಎದುರೂ, ಶಖ್ರಿಯಾರ್‌ ಮಮೆಡ್ಯರೊವ್‌, ಹೌ ಯಿಫಾನ್‌ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry