ಕಾರ್ಮಿಕನ ಕೊಲೆಗೆ ಯತ್ನ

7

ಕಾರ್ಮಿಕನ ಕೊಲೆಗೆ ಯತ್ನ

Published:
Updated:

ಬೆಂಗಳೂರು: ಕೆ.ಆರ್‌.ಪುರ ಬಳಿ ಕೂಲಿ ಕಾರ್ಮಿಕ ಹೊನ್ನಪ್ಪ (45) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.

‘ಯಡಿಯೂರಿನ ಅವರು ಬಸ್‌ ನಿಲ್ದಾಣ ಬಳಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಅವರಿಗೂ ಹಾಗೂ ಸ್ನೇಹಿತ ರಾಘವೇಂದ್ರ ನಡುವೆ ಹಣಕಾಸಿನ ವಿಷಯವಾಗಿ ಜಗಳವಾಗಿತ್ತು. ಮಾತಿನ ಚಕಮಕಿ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ರಾಘವೇಂದ್ರ, ಚಾಕುವಿನಿಂದ ಹೊನ್ನಪ್ಪ ಕತ್ತಿನ ಭಾಗಕ್ಕೆ ಇರಿದಿದ್ದ. ಅದನ್ನು ಗಮನಿಸಿದ್ದ ಸ್ಥಳೀಯರು, ಜಗಳ ಬಿಡಿಸಿ ಹೊನ್ನಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬೌರಿಂಗ್ ಆಸ್ಪತ್ರೆಯಲ್ಲಿ ಹೊನ್ನಪ್ಪ ಚಿಕಿತ್ಸೆ ಪಡೆಯುತ್ತಿದ್ದಾನೆ. ಖರ್ಚಿಗೆ ಹಣ ಕೊಡದಿದ್ದರಿಂದ ರಾಘವೇಂದ್ರ ಈ ಕೃತ್ಯ ಎಸಗಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry