ಶಬರಿಮಲೆಯಲ್ಲೂ ತಿರುಪತಿ ಮಾದರಿ ಸೌಲಭ್ಯ

7

ಶಬರಿಮಲೆಯಲ್ಲೂ ತಿರುಪತಿ ಮಾದರಿ ಸೌಲಭ್ಯ

Published:
Updated:
ಶಬರಿಮಲೆಯಲ್ಲೂ ತಿರುಪತಿ ಮಾದರಿ ಸೌಲಭ್ಯ

ತಿರುವನಂತಪುರ: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಕಲ್ಪಿಸಲಾಗಿರುವ ಸೌಲಭ್ಯಗಳಿಂದ ಪ್ರೇರಣೆಗೊಂಡಿರುವ ಕೇರಳ ಸರ್ಕಾರ, ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲೂ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದೆ.

‘ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ನಿರ್ದೇಶನದಂತೆ ತಜ್ಞರ ತಂಡ ತಿರುಪತಿಗೆ ಭೇಟಿ ನೀಡಿ, ತಿರುಮಲ ಮಾದರಿಯ ಅಭಿವೃದ್ಧಿ ಯೋಜನೆಗಳನ್ನು ಅಧ್ಯಯನ ಮಾಡಲಿದೆ. ಈ ತಂಡಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ’ ಎಂದು ಮುಜರಾಯಿ ಮತ್ತು ‍ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಅಯ್ಯಪ್ಪ ದೇವಾಲಯವು ಅರಣ್ಯದ ನಡುವೆ ಇರುವುದರಿಂದ ಸಾಕಷ್ಟು ಸ್ಥಳಾಭಾವದ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ಗಮನದಲ್ಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

ಅಯ್ಯಪ್ಪ ದೇವಾಲಯವು ವರ್ಷಪೂರ್ತಿ ತೆರೆಯದಿದ್ದರೂ ನವೆಂಬರ್‌– ಜನವರಿಯ ಮೂರು ತಿಂಗಳ ಅವಧಿಯಲ್ಲಿ ಇಲ್ಲಿ ನಡೆಯುವ ಉತ್ಸವದಲ್ಲಿ ದೇಶ ವಿದೇಶಗಳ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry