ಹೆಲಿಕಾಪ್ಟರ್ ಪತನ: ಮುಂಡ ಪತ್ತೆ

7

ಹೆಲಿಕಾಪ್ಟರ್ ಪತನ: ಮುಂಡ ಪತ್ತೆ

Published:
Updated:

ಮುಂಬೈ: ಇಲ್ಲಿನ ಸಮುದ್ರ ತೀರದಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್‌ ಪತನವಾದ ಸಂಬಂಧ ಶೋಧ ಕಾರ್ಯದಲ್ಲಿ ತೊಡಗಿರುವ ತಂಡಕ್ಕೆ ಸೋಮವಾರ ರಾತ್ರಿ ಮುಂಡವೊಂದು ದೊರೆತಿದೆ.

ಇದು ನಾಪತ್ತೆಯಾದ ಪೈಲಟ್‌ನ ಶರೀರದ ಭಾಗ ಎಂದು ಅಂದಾಜಿಸಲಾಗಿದ್ದು, ಡಿಎನ್ಎ ಪರೀಕ್ಷೆ ನಡೆಯುತ್ತಿದೆ. ‘ಡಿಎನ್ಎ ಪರೀಕ್ಷೆ ವರದಿ ಬಂದ ಬಳಿಕವೇ ಸ್ಪಷ್ಟತೆ ಸಿಗಲಿದೆ’ ಎಂದು ಕೂಪರ್ ಮುನ್ಸಿಪಲ್ ಜನರಲ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಣ್ಮರೆಯಾದ ಪೈಲಟ್‌ನ ಸಹೋದರನ ರಕ್ತದ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಶನಿವಾರ ವರದಿ ಲಭ್ಯವಾಗುವ ನಿರೀಕ್ಷೆ ಇದೆ.

ಹೆಲಿಕಾಪ್ಟರ್‌ನಲ್ಲಿ ಇದ್ದ ಏಳು ಜನರ ಪೈಕಿ ಆರು ಜನರ ದೇಹ ಈಗಾಗಲೇ ಪತ್ತೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry