ಪಂತ್ ಅರ್ಧಶತಕ; ದೆಹಲಿ ತಂಡಕ್ಕೆ ಗೆಲುವು

7

ಪಂತ್ ಅರ್ಧಶತಕ; ದೆಹಲಿ ತಂಡಕ್ಕೆ ಗೆಲುವು

Published:
Updated:
ಪಂತ್ ಅರ್ಧಶತಕ; ದೆಹಲಿ ತಂಡಕ್ಕೆ ಗೆಲುವು

ನವದೆಹಲಿ: ರಿಷಭ್ ಪಂತ್‌ (64) ಅವರ ಅರ್ಧಶತಕದ ನೆರವಿನಿಂದ ದೆಹಲಿ ತಂಡ ಸರ್ವಿಸಸ್ ವಿರುದ್ಧದ ಉತ್ತರ ವಲಯ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಪಂದ್ಯದಲ್ಲಿ ಮಂಗಳವಾರ 22 ರನ್‌ಗಳಿಂದ ಜಯಿಸಿತು.

ಎರಡು ದಿನಗಳ ಹಿಂದೆಯಷ್ಟೇ ಪಂತ್ ಹಿಮಾಚಲ ಪ್ರದೇಶ ತಂಡದ ಎದುರು ಎರಡನೇ ವೇಗದ ಶತಕ ದಾಖಲಿಸಿ ಮಿಂಚಿದ್ದರು. 32 ಎಸೆತಗಳಲ್ಲಿ ಅವರು ಶತಕ ಪೂರೈಸಿದ್ದರು.

ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 225 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಸರ್ವಿಸಸ್ 19.1 ಓವರ್‌ಗಳಲ್ಲಿ 203 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.

ಚೌಹಾಣ್‌ ಅರ್ಧಶತಕ: ಸವಾಲಿನ ಮೊತ್ತದ ಎದುರು ಸರ್ವಿಸಸ್ ತಂಡ ದಿಟ್ಟತನದಿಂದ ಆಡಿತು. ಆರಂಭಿಕ ಬ್ಯಾಟ್ಸ್‌ಮನ್ ನಕುಲ್‌ ವರ್ಮಾ (4) ವಿಫಲರಾದರು. ಈ ವೇಳೆ ಒತ್ತಡಕ್ಕೆ ಒಳಗಾಗದ ರವಿ ಚೌಹಾಣ್‌ (53, 23ಎ, 10ಬೌಂ, 1ಸಿ) ಅಂಗಳದಲ್ಲಿ ಮಿಂಚು ಹರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು.

ನಾಯಕ ರಾಹುಲ್ ಸಿಂಗ್‌ (1) ರನ್‌ಔಟ್ ಬಲೆಗೆ ಬಿದ್ದರು. ನಕುಲ್ ಶರ್ಮಾ (53, 36ಎ, 3ಬೌಂ, 3ಸಿ) ತಂಡದ ಮೊತ್ತ  ಹೆಚ್ಚಿಸಿದರು. ವಿಕಾಸ್ ಹತ್ವಾಲಾ (36) ಉತ್ತಮವಾಗಿ ಆಡಿದರು. ದೆಹಲಿ ತಂಡದ ಬೌಲರ್ ಕುಲವಂತ್‌ ಕೆಜ್ರೋಲಿಯಾ 38ರನ್‌ಗಳನ್ನು ನೀಡಿ ಮೂರು ವಿಕೆಟ್ ಕಬಳಿಸಿದರು.

ಪಂತ್‌ ಬ್ಯಾಟಿಂಗ್ ಸೊಬಗು: 11 ಬೌಂಡರಿ ಹಾಗೂ 1ಸಿಕ್ಸರ್‌ ಸಿಡಿಸುವ ಮೂಲಕ ಮಿಂಚಿದ ರಿಷಭ್ ಪಂತ್‌ ದೆಹಲಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. 32 ಎಸೆತಗಳಲ್ಲಿ 64ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಸಾರ್ಥಕ್‌ ರಂಜನ್‌ (25), ನಿತೀಶ್ ರಾಣಾ (30), ಧ್ರುವ ಶೋರೆ (25) ತಂಡವನ್ನು 200ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: ದೆಹಲಿ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 225 (ರಿಷಭ್ ಪಂತ್‌ 64, ನಿತೀಶ್ ರಾಣಾ 30, ಧ್ರುವ ಶೋರೆ 25; ನಿತಿನ್ ಯಾದವ್‌ 53ಕ್ಕೆ3). ಸರ್ವಿಸಸ್‌: 19.1 ಓವರ್‌ಗಳಲ್ಲಿ 203 (ರವಿ ಚೌಹಾಣ್‌ 53, ನಕುಲ್ ಶರ್ಮಾ 53, ವಿಕಾಸ್ ಹತ್ವಾಲಾ 36; ಕುಲವಂತ್‌ ಕೇಜ್ರೋಲಿಯಾ 38ಕ್ಕೆ3). ಫಲಿತಾಂಶ: ದೆಹಲಿ ತಂಡಕ್ಕೆ 22ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry