ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

7

ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

Published:
Updated:
ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

ಅಜ್ಮನ್‌, ಯುಎಇ: ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿ ನಡೆಯುತ್ತಿರುವ ಅಂಧರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಗಣೇಶ್‌ ಭಾಯ್‌ ಮುಡ್ಕರ್‌ (112 ರನ್) ಅವರ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ಏಳು ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡದ ಎದುರು ಗೆದ್ದಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 38.5 ಓವರ್‌ಗಳಲ್ಲಿ 256ರನ್ ಕಲೆಹಾಕಿತು. ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು ಸುಲಭದಲ್ಲಿ ಗುರಿ ತಲುಪಿತು.

ಗಣೇಶ್‌ ಭಾಯ್‌ ಮುಡ್ಕರ್‌ ಕೇವಲ 69 ಎಸೆತಗಳಲ್ಲಿ ಶತಕ ದಾಖಲಿಸಿದರು. ದೀಪಕ್ ಮಲ್ಲಿಕ್‌ (53, 43ಎ), ನರೇಶ್‌ (40, 18ಎ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬಾಂಗ್ಲಾ ತಂಡ 50 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್‌ಗೆ ಬಂದ ಅಬ್ದುಲ್ ಮಲ್ಲಿಕ್‌ 108ರನ್ ದಾಖಲಿಸಿದರು. ಭಾರತದ ಬೌಲರ್‌ ದುರ್ಗಾರಾವ್‌ (20ಕ್ಕೆ3) ಎದುರಾಳಿ ತಂಡದ ರನ್ ಗಳಿಕೆಯನ್ನು ತಡೆದರು. ದೀಪಕ್‌ ಮಲ್ಲಿಕ್ ಹಾಗೂ ಪ್ರಕಾಶ್ ಎರಡು ವಿಕೆಟ್ ಪಡೆದರು.

ಹಾಲಿ ಚಾಂಪಿಯನ್ ಭಾರತ ತಂಡ ಜನವರಿ 20ರಂದು ಪಾಕಿಸ್ತಾನ ತಂಡದ ಎದುರು ಫೈನಲ್ ಪಂದ್ಯ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry