ದಾವಣಗೆರೆ, ತುಮಕೂರು ತಂಡಗಳಿಗೆ ಜಯ

7

ದಾವಣಗೆರೆ, ತುಮಕೂರು ತಂಡಗಳಿಗೆ ಜಯ

Published:
Updated:
ದಾವಣಗೆರೆ, ತುಮಕೂರು ತಂಡಗಳಿಗೆ ಜಯ

ಮೈಸೂರು: ದಾವಣಗೆರೆ ಹಾಗೂ ತುಮ ಕೂರು ವಿಶ್ವವಿದ್ಯಾಲಯ ತಂಡದವರು ಬುಧವಾರ ಇಲ್ಲಿ  ಆರಂಭವಾದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಚಾಂಪಿಯನ್‌ಷಿಪ್‌ ನಲ್ಲಿ ಶುಭಾರಂಭ ಮಾಡಿದರು.

ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯ ತಂಡದವರು 14–8 ಪಾಯಿಂಟ್‌ಗಳಿಂದ ರಾಯಲಸೀಮೆ ವಿಶ್ವ ವಿದ್ಯಾಲಯ ಎದುರು ಗೆದ್ದರು. ಉಭಯ ತಂಡಗಳ ನಡುವೆ ಆರಂಭದಲ್ಲಿ ಭಾರಿ ಪೈಪೋಟಿ ಕಂಡುಬಂತು. ಆದರೆ, ದಾವಣಗೆರೆ ತಂಡ ಆಕ್ರಮಣಕಾರಿ ಆಟದ ಮೂಲಕ ಮೇಲುಗೈ ಸಾಧಿಸಿತು. ಮಧು ತೇಜಸ್‌ 3 ನಿಮಿಷ 10 ಸೆಕೆಂಡ್‌ ಆಟವಾಡಿಸಿ 1 ಪಾಯಿಂಟ್‌ ಗಿಟ್ಟಿಸಿದರು.

ತುಮಕೂರು ವಿ.ವಿ ತಂಡದವರು 16–2 ಪಾಯಿಂಟ್‌ಗಳಿಂದ ಕೊಯ ಮತ್ತೂರಿನ ರಾಮಕೃಷ್ಣ ಮಿಷನ್‌ ವಿವೇಕಾನಂದ ವಿ.ವಿ ತಂಡವನ್ನು

ಪರಾಭವಗೊಳಿಸಿದರು.

ಇನ್ನುಳಿದ ಪಂದ್ಯಗಳಲ್ಲಿ ಬೆಳ ಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 13–3 ಪಾಯಿಂಟ್‌ಗಳಿಂದ ವೆಲ್ಲೂರಿನ ತಿರುವಳ್ಳುವರ್‌ ವಿ.ವಿ ಎದುರೂ, ಬೆಂಗಳೂರು ವಿ.ವಿ 15–8 ಪಾಯಿಂಟ್‌ಗಳಿಂದ ಪುದುಚೇರಿ ವಿ.ವಿ ವಿರುದ್ಧವೂ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ 18–14 ಪಾಯಿಂಟ್‌ಗಳಿಂದ ನೆಲ್ಲೂರಿನ ವಿಕ್ರಂ ಸಿಂಹಪುರಿ ವಿ.ವಿ ಮೇಲೂ ಗೆದ್ದು ಎರಡನೇ ಸುತ್ತು ಪ್ರವೇಶಿಸಿದವು.

ಕೇರಳ ವಿ.ವಿ 21–5 ಪಾಯಿಂಟ್‌ ಗಳಿಂದ ಬೆಂಗಳೂರಿನ ಕ್ರೈಸ್ಟ್‌ ವಿ.ವಿ ಮೇಲೂ, ಮದುರೈ ಕಾಮರಾಜ ವಿ.ವಿ 20–11 ಪಾಯಿಂಟ್‌ಗಳಿಂದ ಗುಲ್ಬರ್ಗ ವಿ.ವಿ ಎದುರೂ, ಸೇಲಂನ ಪೆರಿಯಾರ್‌ ವಿ.ವಿ 19–10 ಪಾಯಿಂಟ್‌ಗಳಿಂದ ಬೆಂಗ ಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ ವಿರುದ್ಧವೂ, ಗುಂಟೂರಿನ ಆಚಾರ್ಯ ನಾಗಾರ್ಜುನ ವಿ.ವಿ 17–9 ಪಾಯಿಂಟ್‌ಗಳಿಂದ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ ಮೇಲೂ ಗೆದ್ದವು.

ನಾಲ್ಕು ದಿನಗಳ ಟೂರ್ನಿ, 57 ತಂಡಗಳು ಭಾಗಿ

ನಾಕ್‌ಔಟ್‌ ಕಮ್‌ ಲೀಗ್‌ ಮಾದರಿ ಟೂರ್ನಿ

ಎರಡನೇ ಸುತ್ತಿಗೆ ಬೆಂಗಳೂರು ವಿ.ವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry