ಪ್ರೀ ಕ್ವಾರ್ಟರ್‌ಗೆ ಸಾಯಿ ಪ್ರಣೀತ್‌

7

ಪ್ರೀ ಕ್ವಾರ್ಟರ್‌ಗೆ ಸಾಯಿ ಪ್ರಣೀತ್‌

Published:
Updated:

ಸಿಬು, ಮಲೇಷ್ಯಾ: ಭಾರತದ ಬಿ.ಸಾಯಿ ಪ್ರಣೀತ್‌, ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಪ್ರಣೀತ್‌ 21–13, 21–13ರಲ್ಲಿ ಥಾಯ್ಲೆಂಡ್‌ನ ಕಂತಾಫೊನ್‌ ವಾಂಗ್‌ಚಾರೊಯೆನ್‌ ಅವರನ್ನು ಮಣಿಸಿದರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರೂ 16ರ ಘಟ್ಟಕ್ಕೆ ಲಗ್ಗೆ ಇಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry