ಸೀನುವಾಗ ಹುಷಾರ್‌

7

ಸೀನುವಾಗ ಹುಷಾರ್‌

Published:
Updated:
ಸೀನುವಾಗ ಹುಷಾರ್‌

ಜೋರಾಗಿ ಸೀನು ಬಂದರೆ ಸೀನಿಬಿಡಿ. ಅದರ ಬದಲು ಮೂಗು ಬಾಯಿ ಕಟ್ಟಿ ಸೀನಿನ ತೀವ್ರತೆಯನ್ನು ತಡೆಯಲು ಪ್ರಯತ್ನಿಸಿದರೆ ಅದು ಮಾರಕವಾಗಿ ಪರಿಣಮಿಸಬಹುದು ಎಂದು ವೈದ್ಯರುಗಳು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್‌ನ ಲೈಸೆಸ್ಟರ್‌ನಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ಸೀನನ್ನು ತಡೆಹಿಡಿಯಲು ಪ್ರಯತ್ನಿಸಿದರಂತೆ. ಮರುಕ್ಷಣವೇ ಅವರ ಗಂಟಲಿನಲ್ಲಿ ಬಾಹು ಕಾಣಿಸಿಕೊಂಡಿತು. ಗಂಟಲಿನಲ್ಲಿ ವಿಪರೀತ ನೋವೂ ಕಾಣಿಸಿಕೊಂಡು ಎಂಜಲು ನುಂಗುವುದೂ ಅಸಾಧ್ಯವಾಯಿತಂತೆ. ಕೊನೆಗೆ ಅವರಿಂದ ಮಾತನಾಡುವುದು ಸಾಧ್ಯವಾಗಲೇ ಇಲ್ಲ. ಒಂದು ವಾರ ಚಿಕಿತ್ಸೆ ನೀಡಿದರು ಅವರ ದನಿ ಸರಿಹೋಗಲಿಲ್ಲ.

ಲೈಸೆಸ್ಟರ್‌ನಲ್ಲಿರುವ ಯುನಿವರ್ಸಿಟಿ ಹಾಸ್ಪಿಟಲ್‌ ವೈದ್ಯರು ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕುತ್ತಿಗೆಯಿಂದ ಪಕ್ಕೆಲುಬಿನವರೆಗಿನ ಜಾಗದಲ್ಲಿ ವಿಚಿತ್ರವಾದ ಶಬ್ದ ಕೇಳಿಬರುತ್ತಿತ್ತು. ‘ಎದೆಯಲ್ಲಿನ ಅಂಗಾಂಶಗಳು ಹಾಗೂ ಜೀವಕೋಶಗಳಲ್ಲಿ ಗುಳ್ಳೆಗಳಾಗಿರುವುದರ ಸಂಕೇತ ಈ ಶಬ್ದ.

ಹೀಗಾಗಿ ಜೋರಾಗಿ ಬರುವ ಸೀನನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವುದು ತುಂಬಾ ಅಪಾಯಕಾರಿ. ಇದರಿಂದ ಶ್ವಾಸಕೋಶಗಳ ನಡುವೆ ಗಾಳಿಕಟ್ಟಿಕೊಳ್ಳುವುದು, ಕಿವಿಪೊರೆಯಲ್ಲಿ ರಂಧ್ರ ಕಾಣಿಸಿಕೊಳ್ಳುವುದು ಹಾಗೂ ಮೆದುಳಿನಲ್ಲಿರುವ ರಕ್ತನಾಳಗಳಲ್ಲಿ ಗುಳ್ಳೆಗಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ’ ಎಂದಿದ್ದಾರೆ ವೈದ್ಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry