ನೆಮ್ಮದಿಗೆ ಇವುಗಳಿಂದ ದೂರವಿರಿ

7

ನೆಮ್ಮದಿಗೆ ಇವುಗಳಿಂದ ದೂರವಿರಿ

Published:
Updated:
ನೆಮ್ಮದಿಗೆ ಇವುಗಳಿಂದ ದೂರವಿರಿ

ಮನೆಮಂದಿಯ ನೆಮ್ಮದಿಗೆ ವಾಸ್ತುಶಾಸ್ತ್ರ ನೆರವಾಗುತ್ತದೆ ಎಂಬುದು ಹಲವರ ನಂಬಿಕೆ. ಮನೆಯ ವಾಸ್ತುವಿಗೆ ಗಮನ ನೀಡುವಾಗ ಯಾವೆಲ್ಲ ವಸ್ತುಗಳು ಮನೆಯಲ್ಲಿ ಇರಬಾರದು ಎಂಬುದು ಮುಖ್ಯವಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.

* ಮಲಗುವ ಕೋಣೆಯಲ್ಲಿ ಕನ್ನಡಿ ಇರುವುದು ಒಳ್ಳೆಯದಲ್ಲ. ಹಾಗೊಮ್ಮೆ ಇದ್ದರೂ, ಅದರಲ್ಲಿ ಮಂಚ ಕಾಣುವಂತಿರಬಾರದು. ಮಂಚ ಕಾಣುವುದರಿಂದ ದಂಪತಿ ನಡುವೆ ಜಗಳ, ವೈಮನಸ್ಸು, ಆರೋಗ್ಯ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ.

* ಕಪ್ಪು ಸುಂದರ ಎನ್ನುವುದು ನಿಜ. ಮಲಗುವ ಕೋಣೆಯಲ್ಲಿ ಕಪ್ಪು ಬಣ್ಣದ ಬಳಕೆ ಕಡಿಮೆ ಇರಬೇಕು. ಕಪ್ಪುಬಣ್ಣದ ಕರ್ಟನ್‌, ಬೆಡ್‌ಶೀಟ್‌ ಬಳಕೆ ಬೇಡ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

* ಗಡಿಯಾರ ಹಾಳಾಗಿದ್ದರೆ ಅದನ್ನು ರಿಪೇರಿ ಮಾಡಿಸಿ. ನಿಂತ ಗಡಿಯಾರವನ್ನು ಇರಿಸಿ ಕೊಂಡ ಮನೆ ಏಳ್ಗೆ ಕಾಣುವುದಿಲ್ಲ.

*ಹಿಂಸೆಯನ್ನು ಬಿಂಬಿಸುವ ಚಿತ್ರಗಳು ಮನೆಯಲ್ಲಿ ಬೇಡ. ವರ್ಣರಂಜಿತ ಹಾಗೂ ಖುಷಿ ಕೊಡುವ ಸುಂದರ ಚಿತ್ರಗಳು ಮನೆಮಂದಿಗೆ ನೆಮ್ಮದಿ ನೀಡುತ್ತವೆ.

* ಪೀಠೋಪಕರಣಗಳ ಬಳಕೆಯ ವಿಚಾರದಲ್ಲಿಯೂ ಎಚ್ಚರವಹಿಸಬೇಕು ಎನ್ನುತ್ತದೆ ವಾಸ್ತು. ತುದಿ ಚೂಪಾಗಿರುವ ಮೊನಚು ಪೀಠೋಪಕರಣಗಳು ಬಳಕೆ ಬೇಡ. ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಕಡಿತಗೊಳಿಸುತ್ತದೆ. ಒಳ್ಳೇ ಶಕ್ತಿಯ ಹರಿವಿನ ದಿಕ್ಕನ್ನು ಬದಲಿಸುತ್ತದೆ.

ಮಾಹಿತಿ: ಹೋಮಿಫೈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry