ಎಚ್‌ಪಿಎಲ್‌: ಸುಲಭವಾಗಿ ಗೆದ್ದ ಬ್ಯಾಷರ್ಸ್‌

7

ಎಚ್‌ಪಿಎಲ್‌: ಸುಲಭವಾಗಿ ಗೆದ್ದ ಬ್ಯಾಷರ್ಸ್‌

Published:
Updated:
ಎಚ್‌ಪಿಎಲ್‌: ಸುಲಭವಾಗಿ ಗೆದ್ದ ಬ್ಯಾಷರ್ಸ್‌

ಹುಬ್ಬಳ್ಳಿ: ಚುರುಕಿನ ಬೌಲಿಂಗ್ ಮೂಲಕ ಎನ್‌.ಕೆ. ವಾರಿಯರ್ಸ್ ತಂಡವನ್ನು 74 ರನ್‌ಗೆ ಆಲೌಟ್ ಮಾಡಿದ ಹುಬ್ಬಳ್ಳಿಯ ಸ್ಕೈಟೌನ್‌ ಬ್ಯಾಷರ್ಸ್‌ ತಂಡ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿತು.

ಟಾಸ್‌ ಗೆದ್ದ ಬ್ಯಾಷರ್ಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ವಾರಿಯರ್ಸ್‌ ತಂಡವನ್ನು 15.5 ಓವರ್‌ಗಳಲ್ಲಿ  ಕಟ್ಟಿಹಾಕಿತು. ದಿಕ್ಷಾಂಶು ನೇಗಿ, ನಿಶಾಂತಸಿಂಗ್‌ ಶೇಖಾವತ್‌ ತಲಾ ಮೂರು ವಿಕೆಟ್‌ ಕಬಳಿಸಿದರೆ, ಎಸ್‌. ಅರುಣ ಎರಡು ವಿಕೆಟ್‌ ಉರುಳಿಸಿದರು. ಅಲ್ಪಮೊತ್ತದ ಗುರಿಯನ್ನು ಬ್ಯಾಷರ್ಸ್‌ 7.5 ಓವರ್‌ಗಳಲ್ಲಿ ಮುಟ್ಟಿತು.

ಇನ್ನೊಂದು ಪಂದ್ಯದಲ್ಲಿ ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್‌ ತಂಡದ ಎದುರು ಧಾರವಾಡದ ಸ್ವರ್ಣ ಸ್ಟ್ರೈಕರ್ಸ್‌ 17 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಸ್ಟ್ರೈಕರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು.

ಟೈಗರ್ಸ್‌ ನಿಗದಿತ ಓವರ್‌ಗಳು ಮುಗಿದಾಗ 163 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು. ಟೈಗರ್ಸ್‌ ತಂಡದ ರೋಹನ ಕದಮ್‌ (62) ಅರ್ಧಶತಕ ಗಳಿಸಿ ಜಯಕ್ಕಾಗಿ ಮಾಡಿದ ಹೋರಾಟಕ್ಕೆ ಫಲ ಲಭಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry