ಸಾತ್ವಿಕ್, ಶರಣ್ ಉತ್ತಮ ಪ್ರದರ್ಶನ

7
ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್‌ಬ್ಯಾಡ್ಮಿಂಟನ್ ಟೂರ್ನಿ

ಸಾತ್ವಿಕ್, ಶರಣ್ ಉತ್ತಮ ಪ್ರದರ್ಶನ

Published:
Updated:
ಸಾತ್ವಿಕ್, ಶರಣ್ ಉತ್ತಮ ಪ್ರದರ್ಶನ

ಕಲಬುರ್ಗಿ: ಕರ್ನಾಟಕದ ಶರಣ್ ಆರ್. ಕದಮ್, ಸಾತ್ವಿಕ್ ಶಂಕರ್ ಮತ್ತು ತುಷಾರ್ ಸುವೀರ್ ಅವರು ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಜಯಿಸಿದರು.

ಗುರುವಾರ ನಡೆದ 13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಶರಣ್ ಆರ್.ಕದಮ್ ಅವರು 21–18, 21–18ರಲ್ಲಿ ಆಂಧ್ರಪ್ರದೇಶದ ಸಾತ್ವಿಕ್ ಪೌಲ್ ಕೇಶವರಾಪು ಅವರನ್ನು ಮಣಿಸಿದರು. ಅದೇ ರೀತಿ ತುಷಾರ್ ಸುವೀರ್ ಅವರು 21–15, 21–5ರಲ್ಲಿ ಮಧ್ಯಪ್ರದೇಶದ ಪ್ರಜ್ವಲ್ ಗೋಲಾಶ್ ಅವರನ್ನು ಸೋಲಿಸಿದರು.

ಚುರುಕಿನ ಆಟವಾಡಿದ ಸಾತ್ವಿಕ್ ಶಂಕರ್ ಅವರು 21–12, 21–17ರಲ್ಲಿ 11ನೇ ಶ್ರೇಯಾಂಕದ ಜಾರ್ಖಂಡ್‌ನ ರೌನಕ್ ನೇಗಿ ಎದುರು ಗೆದ್ದರು. ನಿಕೋಲಸ್ ನಾಥನ್ ರಾಜ್ 21–4, 21–6ರಲ್ಲಿ ಒಡಿಶಾದ ಸ್ವರಾಜ್ ಓರಮ್ ಅವರನ್ನು ಸೋಲಿಸಿದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ವಿಭಾಗದಲ್ಲಿ 16ನೇ ಶ್ರೇಯಾಂಕದ ಆಟಗಾರ್ತಿ ರಿತು ಷಾ 21–12, 21–23, 21–13ರಲ್ಲಿ ಪುದುಚೆರಿಯ ಕೆ.ಯುವರ್ಸಿ ವಿರುದ್ಧ ಗೆದ್ದರು. ಎ.ನೈಸಾ ಕಾರ್ಯಪ್ಪ 21–11, 21–9ರಲ್ಲಿ ಕೇರಳದ ವಂದನಾ ಗೋಪಂ ವಿರುದ್ಧ , ಕಾರ್ಣಿಕಾ ಶ್ರೀ 21–18, 21–18ರಲ್ಲಿ ಹಿಮಾಚಲ ಪ್ರದೇಶದ ತೇಜಸ್ವಿನಿ ಠಾಕೂರ್ ಎದುರು ಜಯಗಳಿಸಿದರು.

ಆಶಿತಾ ಸಿಂಗ್ 21–16, 15–21, 21–16ರಲ್ಲಿ ಆಂಧ್ರಪ್ರದೇಶದ ಆಕಾಂಕ್ಷಾ ಮಟ್ಟೆ ಎದುರು ಗೆದ್ದರು. ಐದನೇ ಶ್ರೇಯಾಂಕದ ವಿಜೇತಾ ಹರೀಶ್‌ 21–12, 21–10 ರಲ್ಲಿ ಉತ್ತರಪ್ರದೇಶದ ಐಶ್ವರ್ಯಾ ಮೆಹ್ತಾ ಅವರನ್ನು ಸೋಲಿಸಿದರು.

15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ 21–10, 21–15ರಲ್ಲಿ ತೆಲಂಗಾಣದ ಅಕ್ಷತ್ ರೆಡ್ಡಿ ಅವರನ್ನು ಮಣಿಸಿದರು. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಆದಿತ್ಯಾ ದಿವಾಕರ್ 21–11, 21–16ರಲ್ಲಿ ಐದನೇ ಶ್ರೇಯಾಂಕದ ಆಟಗಾರ ತೆಲಂಗಾಣದ ಜ್ಞಾನ ಹರ್ಷ ಜೆಟ್ಟಿ ಅವರಿಗೆ ಸೋಲುಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry