ಬ್ಯಾಡ್ಮಿಂಟನ್‌: ಸೆಮಿಗೆ ಆ್ಯಕ್ಸಲ್‌ಸನ್‌

7

ಬ್ಯಾಡ್ಮಿಂಟನ್‌: ಸೆಮಿಗೆ ಆ್ಯಕ್ಸಲ್‌ಸನ್‌

Published:
Updated:
ಬ್ಯಾಡ್ಮಿಂಟನ್‌: ಸೆಮಿಗೆ ಆ್ಯಕ್ಸಲ್‌ಸನ್‌

ಕ್ವಾಲಾಲಂಪುರ: ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ವಿಕ್ಟರ್‌ ಆ್ಯಕ್ಸಲ್‌ಸನ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್ ಹೋರಾಟದಲ್ಲಿ ವಿಕ್ಟರ್‌ 21–15, 19–21, 21–12ರಲ್ಲಿ ಜೊನಾಥನ್‌ ಕ್ರಿಸ್ಟಿ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಕೆಂಟಾ ನಿಶಿಮೋಟೊ 18–21, 21–19, 21–16ರಲ್ಲಿ ಹಾಂಕಾಂಗ್‌ನ ಆ್ಯಂಗಸ್‌ ನಾಗ್‌ ಕಾ ಲಾಂಗ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಕ್ಯಾರೋಲಿನಾ ಮರಿನ್‌ 21–17, 21–16ರಲ್ಲಿ ಲೀ ಯಿಂಗ್‌ ಯಿಂಗ್‌ ಎದುರೂ, ತೈ ಜು ಯಿಂಗ್‌ 21–18, 21–15ರಲ್ಲಿ ಚೆನ್‌ ಯೂಫಿ ಮೇಲೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry