ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಬಾಲಾಜಿ ಬೌಲಿಂಗ್‌ ಕೋಚ್‌

7

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಬಾಲಾಜಿ ಬೌಲಿಂಗ್‌ ಕೋಚ್‌

Published:
Updated:
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಬಾಲಾಜಿ ಬೌಲಿಂಗ್‌ ಕೋಚ್‌

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹಿರಿಯ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ.

ಈ ವಿಷಯವನ್ನು ಸಿಎಸ್‌ಕೆ ತಂಡದ ಸಿಇಒ ಕೆ.ಎಸ್‌.ವಿಶ್ವನಾಥನ್‌ ಶುಕ್ರವಾರ ತಿಳಿಸಿದ್ದಾರೆ.

‘ನ್ಯೂಜಿಲೆಂಡ್‌ನ ಸ್ಟೀಪನ್‌ ಫ್ಲೆಮಿಂಗ್‌ ತಂಡದ ಮುಖ್ಯ ಕೋಚ್‌ ಆಗಿದ್ದು, ಆಸ್ಟ್ರೇಲಿಯಾದ ಮೈಕ್‌ ಹಸ್ಸಿ ಅವರು ಬ್ಯಾಟಿಂಗ್‌ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ. ಬಾಲಾಜಿ ಅನುಭವಿ ಆಟಗಾರ. ಹೀಗಾಗಿ ಅವರಿಗೆ ಬೌಲಿಂಗ್‌ ಕೋಚ್‌ ಜವಾಬ್ದಾರಿ ನೀಡಲಾಗಿದೆ’ ಎಂದು ವಿಶ್ವನಾಥನ್‌ ಹೇಳಿದ್ದಾರೆ.

ತಂಡದ ಟ್ರೈನರ್‌, ಗ್ರೆಗೋರಿ ಕಿಂಗ್‌ ಮತ್ತು ಫಿಸಿಯೊ, ಟಾಮಿ ಸಿಮ್‌ಸೆಕ್‌ ಅವರನ್ನು ನೆರವು ಸಿಬ್ಬಂದಿಗಳನ್ನಾಗಿ ಮುಂದುವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry